ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗ್ರಂಥಾಲಯಕ್ಕೆ ಮೀಸಲಿಟ್ಟಿದ್ದ ಜಾಗದಲ್ಲಿ ಹೋಟೆಲ್: 15 ಲಕ್ಷ ರೂ. ದುರ್ಬಳಕೆ ಆರೋಪ

ಬೆಂಗಳೂರು: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕಂದಾಯ ಭವನದ ಕಟ್ಟಡದಲ್ಲಿ ಗ್ರಂಥಾಲಯ ತೆರೆಯಲು ಮೀಸಲಿಟ್ಟ ಜಾಗದಲ್ಲಿ ಹೊಟೇಲ್ ತೆರೆಯಲಾಗಿದೆ. ಇದಕ್ಕಾಗಿ ಸಂಸದರ ನಿಧಿಯಿಂದ ಬಿಡುಗಡೆ ಮಾಡಿದ 15 ಲಕ್ಷ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ.

ಲೋಕಸಭಾ ಸದಸ್ಯರ ಕ್ಷೇಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಂಸದ ಪಿ.ಸಿ ಮೋಹನ್ 2013-14 ನೇ ಸಾಲಿನಲ್ಲಿ ಜಿಲ್ಲಾಧಿಕಾರಿ ಆವರಣದಲ್ಲಿನ ಕಂದಾಯ ಭವನದ ಕಟ್ಟಡದ ನೆಲಮಹಡಿ ಮತ್ತು ಮೊದಲ ಮಹಡಿಗಳಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣ ಹಾಗೂ ಕುಡಿಯುವ ನೀರಿನ ಯೋಜನೆ, ಶೌಚಗೃಹ ನಿರ್ಮಾಣಕ್ಕೆ ಅನುಮತಿ ನೀಡಿದ್ದರು.

ಬೆಂಗಳೂರು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು ಯೋಜನೆ ಅನುಷ್ಠಾನ ಮಾಡುವಂತೆ ಸೂಚಿಸಿ 15 ಲಕ್ಷ ರೂ ಹಣ ಮೀಸಲಿಟ್ಟಿದ್ದರು. ಮೂರು ತಿಂಗಳಲ್ಲಿ ಕಾಮಗಾರಿ ಮುಗಿಸಲು ಗಡುವು ನೀಡಿ 2014ರ ಜೂನ್ 4 ರಂದು ಸೂಚನಾ ಪತ್ರ ತಲುಪಿಸಿದ್ದರು. ಆದರೆ ಗ್ರಂಥಾಲಯದ ಜಾಗದಲ್ಲಿ 7 ವರ್ಷದಿಂದ ಹೋಟೆಲ್ ನಡೆಸಲಾಗುತ್ತಿದೆ.

Edited By : Manjunath H D
PublicNext

PublicNext

07/05/2022 08:29 pm

Cinque Terre

38.27 K

Cinque Terre

0

ಸಂಬಂಧಿತ ಸುದ್ದಿ