ಬೆಂಗಳೂರು: ಕೇಬಲ್ ಸರಿಪಡಿಸಲು ಮುಂದಾಗಿ ಅರ್ಧಕ್ಕೆ ಬಿಟ್ಟು ಹೋಗಿರುವ ಸಿಬ್ಬಂದಿಯಿಂದ ನಿತ್ಯ ಜನ ಪ್ರಾಣ ಭಯದಿಂದ ಓಡಾಡುವ ಪರಿಸ್ಥಿತಿ ಇದೆ. ನಡುರಸ್ತೆಯಲ್ಲಿ ಕೇಬಲ್ ಗುಂಡಿ ಓಪನ್ ಆಗಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿ, ಜನರ ಓಡಾಟಕ್ಕೂ ತೊಂದರೆ ಆಗಿದೆ.
ಒನ್ ವೇನಲ್ಲೇ ಬರ್ತಾರೆ... ರೋಡಲ್ಲೇ ನಡೆದು ಹೋಗ್ತಾರೆ. 20 ದಿನದಿಂದಲೂ ಯಾರೂ ತಲೆಕೆಡಿಸಿಕೊಳ್ತಿಲ್ಲ. ಪುಲಕೇಶಿನಗರ ಪೊಲೀಸರ ದೂರಿಗೂ ಸ್ಪಂದನೆ ಇಲ್ಲ ಅಂತ ಜನಾಕ್ರೋಶ ವ್ಯಕ್ತ ಪಡಿಸಿದ್ದಾರೆ..ಅಪಾಯದ ಭಯಕ್ಕೆ ಬ್ಯಾರಿಕೇಡ್ ತಂದಿಟ್ಟ ಪುಲಕೇಶಿನಗರ ಪೊಲೀಸರು ಟ್ರಾಫಿಕ್ ಜಾಮ್ ನಿಯಂತ್ರಿಸಿ ಹೈರಾಣಾಗಿ ಹೋಗಿದ್ದಾರೆ.
PublicNext
13/12/2024 12:32 pm