ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಗ್ರಾಮ ವಾಸ್ತವ್ಯ ಇಂದಿನಿಂದ

ಹೊಸಕೋಟೆ: ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಸೇವಾ ಸೌಲಭ್ಯ ತಲುಪಬೇಕು ಎಂಬ ಉದ್ದೇಶದಿಂದ 'ಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆ' ಎಂಬ ಕಾರ್ಯಕ್ರಮದಂತೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಇಂದು ಮತ್ತು ನಾಳೆ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಬೆಳಗ್ಗೆ 11ಕ್ಕೆ ಪ್ರಾರಂಭವಾಗಲಿರುವ 'ಜಿಲ್ಲಾಧಿಕಾರಿ ನಡೆ... ಹಳ್ಳಿ ಕಡೆ' ಅಂಗವಾಗಿ ಮೊದಲಿಗೆ ಪ್ರಸಿದ್ಧ ಶ್ರೀ ರಂಗನಾಥ ದೇವರಿಗೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಶುರುವಾಗಲಿದೆ.

ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಸಣ್ಣಕೈಗಾರಿಕೆ & ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಸ್ಥಳೀಯ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಹೊಸಕೋಟೆ ತಹಶೀಲ್ದಾರ್ ಮಹೇಶ್ ಕುಮಾರ್ ಸಹಿತ ಗ್ರಾಮಾಂತರ ಜಿಲ್ಲೆಯ ಸಂಪೂರ್ಣ ಜಿಲ್ಲಾಡಳಿತದ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಕಲ್ಕುಂಟೆ ಅಗ್ರಹಾರದಲ್ಲಿ ಇಂದು ವಾಸ್ತವ್ಯ ಹೂಡಲಿದ್ದಾರೆ.

ಕಲ್ಕುಂಟೆ ಶ್ರೀ ರಂಗನಾಥ ದೇವರಿಗೆ ಪೂಜೆ ನಂತರ * ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಗ್ರಾಮದ ವೀಕ್ಷಣೆ ನಡೆಸುವರು.

* ಹರಿಜನ ಕಾಲೋನಿಯಲ್ಲಿ ಜನರಿಂದ ಅಹವಾಲು ಸ್ವೀಕರಿಸುವರು.

* ಕಲ್ಕುಂಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಂದ ವಿಶೇಷ ಚೇತನರಿಗೆ ಸಾಧನ ಸಲಕರಣೆ ವಿತರಣೆ.

* ಗ್ರಾಮೀಣ ಕ್ರೀಡೆಗಳ ಉದ್ಘಾಟನೆ.

ರಂಗನಾಥ್ ಶಾಲೇಲಿ ಸಸಿ ನೆಡಲಿರುವ ಜಿಲ್ಲಾಧಿಕಾರಿ.

* ಕಲ್ಕುಂಟೆ ಶಾಲೇಲಿ ವಿವಿಧ ಇಲಾಖೆಗಳ ಮಾಲ್ ಗಳ - ಸ್ಟಾಲ್ ಗಳ ವಿತರಣೆ.

* ವೇದಿಕೆ ಕಾರ್ಯಕ್ರಮ, ಜನಪ್ರತಿನಿಧಿಗಳು, ನಾಡಗೀತೆ, ರಾಷ್ಟ್ರಗೀತೆ ರೈತಗೀತೆ ಜೊತೆಗೆ ವಿವಿಧ ವೇದಿಕೆ ಕಾರ್ಯಕ್ರಮ. ಅರ್ಜಿ-ಅಹವಾಲು ಸ್ವೀಕಾರ.

* ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.

* ರಾತ್ರಿ : 8-30ಕ್ಕೆ ಭೋಜನ.

ಫೆ.20ರಂದು ಭಾನುವಾರ ಬೆಳಗ್ಗೆ 8-30ಕ್ಕೆ ಜಿಲ್ಲಾಧಿಕಾರಿ ಶ್ರೀನಿವಾಸ್ ಕಲ್ಕುಂಟೆ ಅಗ್ರಹಾರ ಗ್ರಾಮದ ಹರಿಜನ‌ ಕಾಲೋನಿಯಲ್ಲಿ ಉಪಹಾರ ಸೇವಿಸುವರು. * 8-45ಕ್ಕೆ ಜನತೆಯಿಂದ ಅರ್ಜಿ ಅಹವಾಲು ಸ್ವೀಕಾರ. ಬೆಳಗ್ಗೆ 9ರ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಕಚೇರಿಯತ್ತ ಪ್ರಯಾಣ ಬೆಳೆಸುವರು. ‌

Edited By : Nagesh Gaonkar
Kshetra Samachara

Kshetra Samachara

19/02/2022 09:18 am

Cinque Terre

3 K

Cinque Terre

0

ಸಂಬಂಧಿತ ಸುದ್ದಿ