ದೇವನಹಳ್ಳಿ: ಈಗಾಗಲೇ ದೇವನಹಳ್ಳಿ ತಾಲೂಕು ಏರ್ ಪೋರ್ಟ್ ಗಾಗಿ 4500 ಎಕರೆ, ಏರೋಸ್ಪೇಸ್ ಪಾರ್ಕ್ ಗಾಗಿ KIADB 2000 ಎಕರೆ ಜಮೀನು ವಶಕ್ಕೆ ಪಡೆದಿತ್ತು. ದಶಕದ ನಂತರ ಚನ್ನರಾಯಪಟ್ಟಣ ಹೋಬಳಿಲಿ ಮತ್ತೆ 2016-17 ರಲ್ಲಿ KIADB ಮೊದಲ ಹಂತದ ಕೈಗಾರಿಕಾ ಪ್ರದೇಶಕ್ಕೆ 1300 ಎಕರೆ ಸ್ವಾಧೀನ ಪಡಿಸಿಕೊಂಡಿತ್ತು.
ಇದೀಗ 2020-21ರ ಸಾಲಿನಲ್ಲಿ ಮತ್ತೆ 2ನೇ ಹಂತದ ಕೈಗಾರಿಕಾ ಪ್ರದೇಶದ ಹೆಸರಲ್ಲಿ 13 ಹಳ್ಳಿಗಳಿಂದ ಮತ್ತೆ 1800 ಎಕರೆ ಸ್ವಾಧೀನಕ್ಕೆ ಮುಂದಾಗಿತ್ತು. ಇದನ್ನು ವಿರೋಧಿಸಿ ದೇವನಹಳ್ಳಿ ಬಂದ್ ನಡೆದಿತ್ತು. ಆಗ ಸರ್ಕಾರ ಸಂಧಾನಕ್ಕೆ ಬಂದು ಈಗ ಸಭೆ ನಡೆಸಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮೊಂಡುತನದಿಂದಾಗಿ ರೈತರು ಹಾಗೂ ಸರ್ಕಾರದ ನಡುವಿನ ಸಭೆ ವಿಫಲವಾಗಿದೆ.
ದೇವನಹಳ್ಳಿ ತಾಲೂಕಿನ ಕಂದಾಯ ಭೂಮಿಲಿ ಶೇ. 60ರಷ್ಟು ಭೂಮಿ ಕೈಗಾರಿಕೆ, ವಾಣಿಜ್ಯ ಚಟುವಟಿಕೆ, ಅಪಾರ್ಟ್ ಮೆಂಟ್ ಹಾಗೂ ಲೇಔಟ್ ಗಳ ನಿರ್ಮಾಣಕ್ಕೆ ಮಾರಾಟವಾಗಿದೆ. ಉಳಿಕೆ 40ರಷ್ಟು ಭೂಮಿಲಿ ಕೆಲವು ಭಾಗದ ಜಮೀನನ್ನು KIADB ವಶಪಡಿಸಿಕೊಂಡ್ರೆ ರೈತರ ಪಾಡೇನು!? ಆದ್ದರಿಂದ ರೈತರು ಚನ್ನರಾಯಪಟ್ಟಣ ಹೋಬಳಿಲಿ ಮತ್ತೆ ಜಮೀನನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಲ್ಲ ಎನ್ನುತ್ತಿದ್ದಾರೆ.
PublicNext
08/07/2022 08:21 pm