ಬೆಂಗಳೂರು: ವಾಷಿಂಗ್ಟನ್‌ನಲ್ಲಿ ಶುಕ್ರವಾರ ಕ್ಯಾಟರ್‌ಪಿಲ್ಲರ್‌ನ ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷೆ ಕೇಟಿ ಹೇಸ್ ಅವರ ಜತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಡಾ. ಮುರುಗೇಶ ಆರ್ ನಿರಾಣಿ ಚರ್ಚಿಸಿದರು.
ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವ ಜತಗೆ 700 ಉದ್ಯೋಗಿಗಳ ಜಾಗತಿಕ ಸೇವಾ ಕೇಂದ್ರದ ವಿಸ್ತರಣೆ ಸಂಬಂಧ ಕ್ಯಾಟರ್‌ಪಿಲ್ಲರ್‌ನ ಸರ್ಕಾರಿ ವ್ಯವಹಾರಗಳ ಉಪಾಧ್ಯಕ್ಷೆ ಕೇಟಿ ಹೇಸ್ ಅವರು ಸಚಿವ ನಿರಾಣಿ ಜತೆ ಚರ್ಚಿಸಿದರು. 2022ರ ನವೆಂಬರ್ 2,3 ಮತ್ತು 4 ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವಭಾವಿಯಾಗಿ, ಬಂಡವಾಳ ಹೂಡಿಕೆ ಆಕರ್ಷಿಸಲು ಡಾ. ಮುರುಗೇಶ ಆರ್ ನಿರಾಣಿ ನೇತೃತ್ವದ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿದೆ.
ಈ ಸಂದರ್ಭದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ ರಮಣ ರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
PublicNext
10/09/2022 12:52 pm