ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅವಾಂತರದಿಂದ ಸಾಕಷ್ಟು ಸಮಸ್ಯೆಯಾಗಿದ್ದು, ಈ ವಿಷಯವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ಏನು ಬಯಸೋಕೆ ಸಾಧ್ಯ. ಮಳೆ ಬಂದು ಜನ ಸಂಕಷ್ಟದಲ್ಲಿದ್ದಾರೆ, ಮಂತ್ರಿಗಳು ಮನೆಯಲ್ಲಿ ಕುಳಿತಿದ್ದಾರೆ. ಸಂಪುಟ ವಿಸ್ತರಣೆ ಆಗುತ್ತೆ ಅಂತ ಕಾಯ್ತಿದ್ದಾರೆ. ಇನ್ನು ಮಳೆ ಬಂದು ಬೆಂಗಳೂರು ಅಸ್ತವ್ಯಸ್ತವಾಗಿದೆ ಎಂದು ನಾವು ಬೆಂಗಳೂರು ಬಿಡಬೇಕಾಗುತ್ತದೆ ಎಂದು ಐಟಿಬಿಟಿಯವರು ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಮೊದಲು ವಿದೇಶಿಗರು ದೆಹಲಿಗೆ ಬರುತ್ತಿದ್ದರು. ನಂತರ ಬೆಂಗಳೂರಿಗೆ ಬರೋಕೆ ಇಚ್ಚೆಪಡ್ತಿದ್ರು. ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ಕಾಲದಲ್ಲಿ ಆ ರೀತಿ ಆಗಿತ್ತು. ಈಗ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಲೀಂ ಅಹ್ಮದ್ ಕಿಡಿಕಾರಿದ್ದಾರೆ.
ಇನ್ನು ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಹೆಚ್ಚಾಗಿದೆ. ಬೆಂಗಳೂರು ಬಗ್ಗೆ ಯಾವುದೇ ಪ್ಲಾನಿಂಗ್ ಇಲ್ಲ. ಜನರಿಗೆ ಇವತ್ತು ನರಕ ದರ್ಶನವಾಗುತ್ತಿದೆ. ಇವತ್ತು ಉತ್ಸವ ಮಾಡೋಕೆ ಹೊರಟಿದ್ದಾರೆ. ಇವರು ಜನೋತ್ಸವ ಬಿಟ್ಟು ಕ್ಷಮೆ ಕೇಳುವ ಉತ್ಸವ ಮಾಡಬೇಕು. ದೊಡ್ಡ ದೊಡ್ಡ ಸಂಸ್ಥೆಗಳೇ ಪತ್ರ ಬರೆದಿವೆ. ರಾಷ್ಟ್ರೀಯ ಮಟ್ಟದಲ್ಲಿ ಇವತ್ತು ಚರ್ಚೆಯಾಗ್ತಿದೆ. ಸದನದಲ್ಲೂ ನಾವು ಇದನ್ನ ಪ್ರಸ್ತಾಪ ಮಾಡ್ತೇವೆ ಎಂದು ಸರ್ಕಾರದ ವಿರುದ್ಧ ಸಲೀಂ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದಾರೆ.
ಬೆಂಗಳೂರು ಇಂಟರ್‌ನ್ಯಾಷನಲ್ ಸಿಟಿ ಎಂದು ಖ್ಯಾತಿ ಪಡೆದಿದ್ದು, ಈಗ ಮಳೆಯಿಂದ ಹಾಳಾಗಿದೆ. ಮುಖ್ಯಮಂತ್ರಿಗಳೇ ಬೆಂಗಳೂರು ಉಸ್ತುವಾರಿಯಾಗಿದ್ದಾರೆ. ಸದನದಲ್ಲಿ ಇದನ್ನ ನಾವು ಪ್ರಸ್ತಾಪಿಸ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
PublicNext
05/09/2022 06:42 pm