ವರದಿ: ಗಣೇಶ್ ಹೆಗಡೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 198 ವಾರ್ಡ್ ಗಳನ್ನು 243 ವಾರ್ಡ್ ಗಳಾಗಿ ಮಾರ್ಪಾಟು ಮಾಡಲಾಗಿದೆ. ಹೊಸದಾಗಿ 45 ವಾರ್ಡ್ ಗಳನ್ನು ರಚಿಸಲಾಗಿದೆ. ಈ ಹೊಸ ವಾರ್ಡ್ ಗಳಿಂದ ಬಿಬಿಎಂಪಿ ಗೆ 225 ಕೋಟಿ ರೂ. ಹೊರೆ ಬೀಳಲಿದೆ.
243 ವಾರ್ಡ್ ಗಳ ರಚನೆ ಹಾಗೂ ಗಡಿ ರೇಖಾಚಿತ್ರ ಅಂತಿಮಗೊಳಿಸಿ ಹೊಸ 45 ವಾರ್ಡ್ ಗಳಿಗೆ ಕಚೇರಿ ಹಾಗೂ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಬೇಕು.
ಇದರಿಂದಾಗಿ ಪ್ರತಿ ವಾರ್ಡ್ ಗೆ ಅಂತಂದ್ರೆ 45 ಹೊಸ ವಾರ್ಡ್ ಗೆ ಅಂದಾಜು 4 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಪ್ರತಿ ಹೊಸ ವಾರ್ಡ್ ಗೆ ಹೆಚ್ಚುವರಿ ಸಹಾಯಕ ಕಾರ್ಯಪಾಲಕ ನಿರ್ವಾಹಕ ಎಂಜಿನಿಯರ್, ಪೌರ ಕಾರ್ಮಿಕರು, ಘನತಾಜ್ಯ ನಿರ್ವಹಣಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಿಬ್ಬಂದಿ ಅಗತ್ಯವಿದೆ.
ಇನ್ನು, ಹೊಸ ವಾರ್ಡ್ ಗಳಿಗೆ ಕಚೇರಿ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
PublicNext
21/07/2022 02:17 pm