ವಿಶೇಷ ವರದಿ-ಗಣೇಶ್ ಹೆಗಡೆ
ಬೆಂಗಳೂರು:ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕಳೆದ ವಾರ ಒಂದೇ ದಿನ ಸಾಮೂಹಿಕ ವರ್ಗಾವಣೆ ಹಾಗೂ ಮೇಲ್ದರ್ಜೆ ಪ್ರಕ್ರಿಯೆ ನಡೆದಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಮುಖ್ಯ ಅಭಿಯಂತರ, ಸಹಾಯಕ ಅಭಿಯಂತರ, ಎಂಜನೀಯರ್ಸ್ ಸೂಪರಿಡೆಂಟ್ ಎಂಜನೀಯರ್ಸ್ ಗಳ ಸಾಮೂಹಿಕ ವರ್ಗಾವಣೆ ಆಗಿದೆ.
ಸಿ.ಇ ಗಳು 10 ಮಂದಿ, ಹಾಗೂ ಎ ಸಿ ಇ 55 ಮಂದಿ, ಎಸ್ ಇ 25 ,ಎಂಜನಿಯರಿಂಗ್ ವಿಭಾಗದಲ್ಲೂ 80ಕ್ಕೂ ಹೆಚ್ಚಿನ ಜನರಿಗೆ ಪ್ರಮೋಷನ್ ನೀಡಲಾಗಿದೆ.
ವಿಪರ್ಯಾಸವೆಂದರೆ ಮುಖ್ಯ ಅಭಿಯಂತರ ಕೇವಲ 04 ಹುದ್ದೆ ಖಾಲಿಯಿತ್ತು. ಸಹಾಯಕ ಅಭಿಯಂತರ 42, ಸೂಪರಿಡೆಂಟ್ ಎಂಜನೀಯರ್ಸ್ 14 ಸೇರಿದಂತೆ ಎಂಜನೀಯರ್ಸ್ ಗಳಿಗೆ ಭಾರಿ ಕಡಿಮೆ ಹುದ್ದೆ ಇದ್ರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಮೋಷನ್ ನೀಡಿರೋದು ಅನುಮಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ BWSSB ಅಧ್ಯಕ್ಷ ಜಯರಾಮ್ ಸರ್ಕಾರದ ಆದೇಶದಂತೆ ಸಾಮೂಹಿಕವಾಗಿ ವರ್ಗಾವಣೆ ಮಾಡಲಾಗಿದೆ. ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ತಿಳಿಸಿದರು.
PublicNext
18/07/2022 07:47 pm