ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಇಫ್ಕೋ ನ್ಯಾನೊ ಯೂರಿಯಾ ಸ್ಥಾವರ" ಇಂದು ಸಿಎಂ ಅಡಿಗಲ್ಲು; ಪೊಲೀಸ್‌ ಸರ್ಪಗಾವಲು

ದೇವನಹಳ್ಳಿ: ದೇವನಹಳ್ಳಿಯ ನಾಗನಾಯಕನಹಳ್ಳಿ KIADB ಏರೋಟೆಕ್ ಪಾರ್ಕ್ ಬಳಿ ಇಫ್ಕೋ ನ್ಯಾನೊ ಯೂರಿಯಾ ಸ್ಥಾವರದ ಅಡಿಗಲ್ಲು ಕಾರ್ಯಕ್ರಮ ನಡೆಯಲಿದೆ. ಸಿಎಂ ಬಸವರಾಜ್‌ ಬೊಮ್ಮಾಯಿ ಭಾಗಿಯಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು ಭಾರಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದಾರೆ. 50 ಪೊಲೀಸ್ ಆಫೀಸರ್ಸ್ ಸೇರಿ 250‌ ಪೊಲೀಸ್ ಸಿಬ್ಬಂದಿ, 1 KSRP ತುಕಡಿ, 1 DRP ತುಕಡಿ ಸೇರಿದಂತೆ 450ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಕ್ರಮದ ಭದ್ರತೆಗೆ ನಿಯೋಜನೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಕೋನ ವಂಶೀಕೃಷ್ಣ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಚನ್ನರಾಯಪಟ್ಟಣ ರೈತರು ಸಹ KIADB 2ನೇ ಹಂತದ 1777 ಜಮೀನು ಸ್ವಾಧೀನ ವಿರೋಧಿಸಿ ಧರಣಿ ನಡೆಸುತ್ತಿದ್ದು, ಇಂದಿನ‌ ಕಾರ್ಯಕ್ರಮದಲ್ಲೇ ಮನವಿ ಸಲ್ಲಿಸಲಿದ್ದಾರೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದೆಂಬ ದೃಷ್ಟಿಯಿಂದ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಈ ಎಲ್ಲಾ ವಿಷಯ ಕುರಿತು ಕಾರ್ಯಕ್ರಮ ಸ್ಥಳದಲ್ಲಿ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Walk through ನಿಮಗಾಗಿ...

Edited By : Somashekar
PublicNext

PublicNext

14/07/2022 07:56 pm

Cinque Terre

39.76 K

Cinque Terre

0

ಸಂಬಂಧಿತ ಸುದ್ದಿ