ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಹಂಚಿಕೆ ಮಾಹಿತಿ ಅಸ್ಪಷ್ಟ

ಬೆಂಗಳೂರು: ಬಿಬಿಎಂಪಿಯ 243 ವಾರ್ಡ್‌ಗಳ ಮರುವಿಂಗಡಣೆ ಕರಡು ಪಟ್ಟಿಯನ್ನು ಪ್ರಕಟಿಸಿದ ಸರ್ಕಾರ, ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ್ದರೂ, ವಾರ್ಡ್‌ಗಳ ಗಡಿ ವೀಕ್ಷಣೆಗೆ ಜನ ಸಾಮಾನ್ಯರಿಗೆ ಅವಕಾಶವೇ ಇಲ್ಲದಂತೆ ಮಾಡಿದೆ. ನಗರದಲ್ಲಿ 1.3 ಕೋಟಿ ಜನಸಂಖ್ಯೆಯಿದ್ದು, 94 ಸಾವಿರಕ್ಕೂ ಹೆಚ್ಚು ಮತದಾರರು ಇರುವ ಬಗ್ಗೆ 2022ರ ಚುನಾವಣಾ ಆಯೋಗ ಪ್ರಕಟಣೆಯಿಂದ ತಿಳಿದುಬಂದಿದೆ.

ದೊಡ್ಡಮಟ್ಟದ ಜನಸಂಖ್ಯೆಗೆ ಅನ್ವಯವಾಗುವ ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಕರಡು ಪಟ್ಟಿಯನ್ನು ಜನಸಾಮಾನ್ಯರು ವೀಕ್ಷಣೆ ಮಾಡಲು ಅವಕಾಶ ಇಲ್ಲದಂತೆ ಬಿಬಿಎಂಪಿ ವೆಬ್‌ಸೈಟ್‌ಗೆ ಮಾತ್ರ ಸೀಮಿತ ಮಾಡಲಾಗಿದೆ. ಪಾಲಿಕೆಯ ವೆಬ್‌ಸೈಟ್‌ನಲ್ಲಿ ಮೊಬೈಲ್‌ನಲ್ಲಿ ವೀಕ್ಷಣೆ ಮಾಡಬಹುದಾದರೂ, ಅದರಲ್ಲಿ ವಾರ್ಡ್‌ಗಳ ಕುರಿತು ಗಡಿಗಳನ್ನು ವೀಕ್ಷಣೆ ಮಾಡಲು ಹಾಗೂ ಹಳೆಯ ವಾರ್ಡ್‌ನ ವ್ಯಾಪ್ತಿ ಮತ್ತು ವಿಸ್ತರಣೆ ಬಗ್ಗೆ ಮಾಹಿತಿ ತೆರೆದುಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ.

ಇನ್ನು ಮೊಬೈಲ್‌ನಲ್ಲಿ ವೀಕ್ಷಣೆ ಮಾಡಲು ಮುಂದಾದಲ್ಲಿ ಒಂದು ಕಡೆ ಕ್ಲಿಕ್ ಮಾಡಿದರೆ ಮತ್ತೊಂದು ವಾರ್ಡ್ ತೆರಯುತ್ತದೆ. ಹೀಗಾಗಿ, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ಮಾತ್ರ ವಾರ್ಡ್ ಮರುವಿಂಗಡಣೆ ಪಟ್ಟಿ ವೀಕ್ಷಣೆ ಮಾಡಬೇಕಾಗಿದೆ.

Edited By : Nagaraj Tulugeri
Kshetra Samachara

Kshetra Samachara

29/06/2022 01:34 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ