ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಾಭದತ್ತ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ; ತಾರಾ ಅನುರಾಧ

ಬೆಂಗಳೂರು: ಕಳೆದ ಒಂದುವರೆ ವರ್ಷದಲ್ಲಿ ಸುಮಾರು 40 ಕೋಟಿ ರೂ.ನಷ್ಟು ಠೇವಣಿ ನಿಶ್ಚಿತವಾಗಿದೆ. ನೀಲಗಿರಿ ಬೆಳೆ ನಿಷೇಧ ನಡುವೆಯೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಲಾಭದತ್ತ ಸಾಗುತ್ತಿದ್ದು, ಇದಕ್ಕೆ ಇನ್ನಷ್ಟು ವೇಗ ನೀಡಲು ಹಲವಾರು ನೂತನ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷೆ ತಾರಾ ಅನುರಾಧ ತಿಳಿಸಿದ್ದಾರೆ.

ಸರಕಾರ ನೀಲಗಿರಿ ಬೆಳೆಸುವುದನ್ನು ನಿಷೇಧಿಸಿದ ನಂತರ ನಿಗಮ ವತಿಯಿಂದ ಕ್ಯಾಸುರಿನ, ಹೆಬ್ಬೇವು, ಸುಬಾಬುಲ್‌ಗಳಂತಹ ಪರ್ಯಾಯ ಜಾತಿ ಮರ ಬೆಳೆಸಲು ವ್ಯವಸ್ಥೆ ಮಾಡಲಾಗಿದೆ. ನಿಗಮದಡಿ 40 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿಯಿದ್ದು, ಇನ್ನೂ 10 ಸಾವಿರ ಹೆಕ್ಟೇರ್‌ ಭೂಮಿಯನ್ನು ಅರಣ್ಯ ಇಲಾಖೆಯಿಂದ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅರಣ್ಯ ಹೆಚ್ಚಿಸುವ, ಒತ್ತುವರಿ ತಡೆಯುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಅರಣ್ಯದ ಅಂಚಿನ ಭೂಮಿಯಲ್ಲಿ ಗಿಡ ನೆಡುವುದು ಹಾಗೂ ಅವುಗಳಿಂದ ಬರುವ ಉತ್ಪನ್ನಗಳ ಮೂಲಕ ಆರ್ಥಿಕ ಚಟುವಟಿಕೆ ನಡೆಸುವುದು ನಮ್ಮ ಪ್ರಮುಖ ಆದ್ಯತೆ. ಕಳೆದ ಹಲವು ವರ್ಷಗಳಿಂದ ನಿಗಮದ ಕಾರ್ಯಗಳಲ್ಲಿ ಇದ್ದ ಲೋಪದೋಷ ನಿವಾರಿಸಿದ್ದೇವೆ. ಹೊಸ ರೀತಿಯ ಟಾರ್ಗೆಟ್‌ ಬೇಸ್ಡ್‌ ಅಪ್ರೋಚ್‌ ಮೂಲಕ ನಿರಂತರವಾಗಿ ಗುರಿ ತಲುಪುತ್ತಿದ್ದೇವೆ ಎಂದರು.

ವರದಿ: ರಂಜಿತಾ ಸುನಿಲ್ ʼಪಬ್ಲಿಕ್‌ ನೆಕ್ಸ್ಟ್‌ʼ ಬೆಂಗಳೂರು

Edited By : Nagesh Gaonkar
PublicNext

PublicNext

24/06/2022 10:04 pm

Cinque Terre

38.8 K

Cinque Terre

0

ಸಂಬಂಧಿತ ಸುದ್ದಿ