ಬೆಂಗಳೂರು: ರಾಜ್ಯದಲ್ಲಿಯೇ ಅತ್ಯಂತ ಪ್ರತಿಷ್ಠಿತ ವಾರ್ಡ್ ಯಾವ್ದಾದ್ರೂ ಇದೆ ಅಂದ್ರೆ, ಅದು ಅರಮನೆ ನಗರ ವಾರ್ಡ್. ಜನಪ್ರಿಯ ರಾಜಕಾರಣಿಗಳು, ಪ್ರಸಿದ್ಧ ಬ್ಯುಸಿನೆಸ್ ಮನ್ ಗಳು ಇವ್ರಿಗೆಲ್ಲ ಈ ಪ್ರದೇಶನೇ ಫೇವರೇಟ್. ಈ ವಾರ್ಡ್ ಅವಲೋಕನ ಇಲ್ಲಿದೆ...
ಅರಮನೆ ನಗರ ವಾರ್ಡ್ ನಂ.35. ಈ ವಾರ್ಡ್ ರಾಜ್ಯದಲ್ಲೇ ಅತಿ ಪ್ರತಿಷ್ಠಿತ ವಾರ್ಡ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಯಾಕಂದ್ರೆ ಪ್ರಸಿದ್ಧ ರಾಜಕಾರಣಿಗಳು, ಸೆಲೆಬ್ರೆಟಿಗಳು, ಬಿಸಿನೆಸ್ ಮನ್ ಗಳಿಗೆಲ್ಲ ಈ ವಾರ್ಡ್ ಫೇವರೇಟ್. ಈ ವಾರ್ಡ್ ಮಲ್ಲೇಶ್ವರಂ ಕ್ಷೇತ್ರಕ್ಕೆ ಒಳಪಟ್ಟಿದ್ದು, ಸಿ.ಎಸ್. ಅಶ್ವತ್ಥನಾರಾಯಣ್ ಅವ್ರು ಶಾಸಕರಾಗಿದ್ರೆ, ಸದಾನಂದ ಗೌಡರು ಎಂಪಿ ಆಗಿದ್ದಾರೆ.
ಈ ಅರಮನೆ ನಗರ ವಾರ್ಡ್ ಗೆ ಸದಾಶಿವನಗರ, ಎಂಎಸ್ಆರ್ ನಗರ, ಜಯಮಹಲ್ ಕೆಲವು ಭಾಗ, ಅಶ್ವತ್ಥನಗರ, ಡಾಲರ್ಸ್ ಕಾಲೋನಿ, ಪೂಜಾರಿ ಲೇಔಟ್ ಸೇರಿ ಹಲವು ಪ್ರದೇಶ ಒಳಪಟ್ಟಿದೆ. ಬೆಂಗಳೂರಿನ ಖ್ಯಾತ ಕೆರೆ ಸ್ಯಾಂಕಿ ಟ್ಯಾಂಕ್, ಪ್ಯಾಲೇಸ್ ಗ್ರೌಂಡ್, ಜಯಮಹಲ್ ಪ್ಯಾಲೇಸ್ ಸೇರಿ ಹಲವು ಸುಪ್ರಸಿದ್ಧ ಸ್ಥಳಗಳನ್ನೂ ಒಳಗೊಂಡಿದೆ.
ಈ ಪ್ರದೇಶದ ಸದಾಶಿವನಗರ, ಎಂಎಸ್ಆರ್ ನಗರ ಭಾಗ ಅಭಿವೃದ್ಧಿಗೊಂಡಿದೆ. ಆದ್ರೆ ಆಶ್ವತ್ಥನಗರ ಸೇರಿ ಕೆಲವು ಭಾಗದಲ್ಲಿ ಸಮಸ್ಯೆ ಮುಂದುವರಿದಿದೆ. ಕೆಲ ರಸ್ತೆ ಹಾಳಾಗಿದೆ. ಓಎಫ್ ಸಿ ಕೇಬಲ್ ಕಾಮಗಾರಿ, ಒಳಚರಂಡಿ ಕಾಮಗಾರಿಗೆಂದು ರಸ್ತೆ ಅಗೆದ್ರೆ ಸರಿಯಾಗಿ ಮುಚ್ಚೋದಿಲ್ಲ. ಮಳೆ ಬಂದಾಕ್ಷಣ ಹೊಂಡ ಬಿದ್ದು, ರೋಡ್ ಹದಗೆಡುತ್ತದೆ.
ಸ್ಯಾಂಕಿ ಟ್ಯಾಂಕ್ ನ್ನು 1882ರಲ್ಲಿ ಬ್ರಿಟಿಷ್ ಅಧಿಕಾರಿ ಕರ್ನಲ್ ರಿಚರ್ಡ್ ಹಿರಮ್ ಸ್ಯಾಂಕಿ ಯೂ ನೀರಿನ ಕೊರತೆ ನೀಗಿಸಲು ಕಟ್ಟಿಸಿದ್ದರು. 37 ಎಕರೆಯಲ್ಲಿನ ಸ್ಯಾಂಕಿ ಕೆರೆಗೆ ಸಾವಿರಾರು ಜನ ವಾಕಿಂಗ್ , ಜಾಗಿಂಗ್ ಹಾಗೇ ವೀಕ್ಷಣೆಗೆ ಬರುತ್ತಾರೆ. ಕೆರೆ ಅಭಿವೃದ್ಧಿಗೆ ಸಾಕಷ್ಟು ಅನುದಾನ ಸಿಕ್ಕಿದ್ದು ಜಾಗಿಂಗ್- ವಾಕಿಂಗ್ ವೇ ಅಗಲೀಕರಣ, ಕೆರೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಕೆಲ ತಿಂಗಳಲ್ಲಿ ಈ ಕೆರೆ ಸಾರ್ವಜನಿಕ ಬಳಕೆಗೆ ಸಿಗಲಿದೆ.
ಕೊರೊನಾ ನಿರ್ವಹಣೆ ಹಾಗೂ ಪಾರ್ಕ್ ಗಳತ್ತ ಹೆಚ್ಚಿನ ಒತ್ತು ನೀಡಲಾಗಿದೆ. ಬಸವಣ್ಣ ಪಾರ್ಕ್ , ಕೆಂಪೇಗೌಡ ಪಾರ್ಕ್ , ಈಗಲ್ ಬಾಸ್ಕೆಟ್ ಬಾಲ್ ಗ್ರೌಂಡ್ ಸಹಿತ ಹಲವು ಅಭಿವೃದ್ಧಿ ಕಾರ್ಯ ನಡೆದಿವೆ ಅಂತಿದ್ದಾರೆ ಮಾಜಿ ಕಾರ್ಪೊರೇಟರ್.
ದಿ. ಡಾ.ಪುನೀತ್ ರಾಜ್ ಕುಮಾರ್ ಇದೇ ವಾರ್ಡ್ ನಿವಾಸಿಯಾಗಿದ್ದರು. ಅವರು ಕೆಂಪೇಗೌಡ ಪಾರ್ಕ್ ಗೆ ವಾಕಿಂಗ್ ಮಾಡಲು ಬರ್ತಿದ್ದಾರಂತೆ. ಸಾಕಷ್ಟು ಜನ ಅವರನ್ನೀಗ ಸ್ಮರಿಸುತ್ತಾರೆ. ಒಟ್ಟಿನಲ್ಲಿ ಅಶ್ವತ್ಥನಗರ ಸೇರಿ ಕೆಲ ಭಾಗ ಇನ್ನಷ್ಟು ಅಭಿವೃದ್ಧಿಯಾಗಬೇಕಾಗಿದೆ.
ಕ್ಯಾಮೆರಾಮನ್ ಅಜ್ಹರ್ ಜತೆ ಗಣೇಶ್ ಹೆಗಡೆ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
09/04/2022 08:28 pm