ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಸಿದ್ಧತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಟ್ರಾಫಿಕ್ ಪೊಲೀಸ್, ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿ ಎಲ್ಲರೂ ಅಲರ್ಟ್ ಆಗಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಜನರನ್ನು ಹೇಗೆ ಕಂಟ್ರೋಲ್ ಮಾಡಬೇಕೆಂದು ಇವತ್ರು ಕೆಂಗೇರಿ ಬಂಡೆಮಠದಲ್ಲಿ ಟ್ರಾಫಿಕ್ ಪೊಲೀಸರು ಸಭೆ ನಡೆಸಿದರು. ಇವತ್ತಿನಿಂದಾನೆ ಕೆಲಸ ಶುರುವಾಗಿದ್ದು, ಅನುಮಾನ ಬಂದವರ ಮೇಲೆ ನಿಗಾ ಇಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಬ್ಯಾರಿಗೇಡ್ ಅಳವಡಿಸಲಾಗಿದೆ. ಪ್ರಧಾನಿಯವರು ಬರುವ ಎಲ್ಲಾ ರಸ್ತೆಗಳೂ ಭಾನುವಾರವೇ ಕ್ಲೋಸ್ ಆಗಬಹುದು.
ಒಟ್ಟಿನಲ್ಲಿ ಈ ಸಿಬ್ಬಂದಿಯೆಲ್ಲ ಪ್ರತಿನಿತ್ಯವೂ ಈ ತರ ಕೆಲಸ ಮಾಡ್ಬಿಟ್ರೆ, ನಗರದಲ್ಲಿ ಕಸದ ಸಮಸ್ಯೆ ಇರಲ್ಲ, ಕಳ್ಳತನ ನಡೆಯೋದಿಲ್ಲ, ಕರೆಂಟ್ ಸಮಸ್ಯೆ ಕಾಡೋಲ್ಲ, ರಸ್ತೆ ಸಮಸ್ಯೆಯಂತೂ ಹತ್ತಿರ ಸುಳಿಯಲ್ಲ! ಅಲ್ವೇ?
Kshetra Samachara
17/06/2022 07:45 pm