ಹೊಸಕೋಟೆ: ಯಾದವ ಸಮಾಜದಿಂದ ಹೊಸಕೋಟೆಯಲ್ಲಿಂದು ಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಭಾಗವಹಿಸಿದ್ದರು. ಇಷ್ಟೇ ಆಗಿದ್ದರೆ ಏನೂ ಸುದ್ದಿಯಾಗುತ್ತಿರಿಲಿಲ್ಲ. ಇತ್ತೀಚಿಗೆ ಹೊಸಕೋಟೆಲಿ ಎಂಟಿಬಿ ನಾಗರಾಜ್ ಅವರ ನಿಂಬೆಹಣ್ಣಿನ ಡ್ಯಾನ್ಸ್ ಮತ್ತು ಹುಲಿ ವೇಷದ ಡ್ಯಾನ್ಸ್‌ಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ.
ಯಾವುದೇ ಕಾರ್ಯಕ್ರಮ ಇರಲಿ, ಅಲ್ಲಿ ತಮಟೆ ಟೀಮ್ ಇದ್ದರೆ ಎರಡೇಟು, ಮೂರೇಟಿನ ಎಂಟಿಬಿ ಕುಣಿಯಲೇಬೇಕು ಎಂದು ಅಭಿಮಾನಿಗಳು ತುಂಬಾನೆ ಡಿಮ್ಯಾಂಡ್ ಮಾಡ್ತಾರೆ. ಆದ್ದರಿಂದ ಎಂಟಿಬಿ ನಾಗರಾಜ್ ಸಹ ಜನರ- ಅಭಿಮಾನಿಗಳ ಒತ್ತಾಸೆ ಮೇರೆಗೆ ಚೆನ್ನಾಗಿ ಕುಣಿಯುತ್ತಿದ್ದಾರೆ. ಒಂದೇಟು ಮತ್ತು ಎರಡೇಟಿಗೆ ಕತ್ತಿ ಹಿಡಿದು ಹೆಜ್ಜೆ ಹಾಕಿದರೆ ಎಂತಹ ನೋಡುಗ ಸಹ ಎಂಟಿಬಿ ಜೊತೆ ಹೆಜ್ಜೆ ಹಾಕಲೇಬೇಕು ಎನ್ನುವಂತಹ ಹೆಜ್ಜೆ ಹಾಕಿ ನೆರೆದಿದ್ದ ಜನರನ್ನು ಸಖತ್ತಾಗೆ ರಂಜಿಸುತ್ತಾರೆ. ಈ ರೀತಿಯ ಎಂಟಿಬಿ ನಾಗರಾಜ್ ಅವರ ನಾಗಿಣಿ ಡ್ಯಾನ್ಸ್ ಮತ್ತು ನಿಂಬೆಹಣ್ಣಿನ ಡ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
SureshBabu ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
28/08/2022 11:00 pm