ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಮಂದೂರು ಗ್ರಾಪಂ ವ್ಯಾಪ್ತಿಯ ಗುಡ್ನಹಳ್ಳಿ ಗ್ರಾಮದಲ್ಲಿರುವ
ಸಾಯಿರಾಂ ಕಾಲೇಜಿನಲ್ಲಿ 21ನೇ ಘಟಿಕೋತ್ಸವ ಜರುಗಿತು. ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ, VTU ನಿರ್ದೇಶಕ ಸುದರ್ಶನ ರೆಡ್ಡಿ ಉಪಸ್ಥಿತರಿದ್ದರು.
ಕಾಲೇಜಿನ 178 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಪದವಿ ಪ್ರದಾನ ನಡೆಯಿತು ಹಾಗೂ Rank ಪಡೆದ ವಿದ್ಯಾರ್ಥಿಗಳಿಗೆ ಕೇಂದ್ರ ಸಚಿವರು ಪದವಿ ಪ್ರಮಾಣಪತ್ರ ವಿತರಿಸಿದರು. ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್, ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನಿಸಲಾಯಿತು.
ಈ ಸಂದರ್ಭ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಯಾವ ಶಿಕ್ಷಣ ಪಡೆದರೆ ಯಾವ ಉದ್ಯೋಗ ಸಿಗುತ್ತೆ ಅಂತ ಈಗಲೂ ಗೊತ್ತಿಲ್ಲ! ಅಂತಹ ಶಿಕ್ಷಣ ಪಡೆಯುತ್ತಿದ್ದೇವೆ. ಸಮಾಜವನ್ನು ಅರಿತು ಕೊಳ್ಳುವುದಕ್ಕೆ ಜ್ಞಾನ ಬೇಕು. ನಮ್ಮ ದೇಶದಲ್ಲಿ ಅಂತಹ ಶಿಕ್ಷಣ ಸಿಗುತ್ತಿಲ್ಲ. ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಅಗತ್ಯ. ಉನ್ನತ ಶಿಕ್ಷಣ ಪಡೆಯಬೇಕಾದರೆ 75 ಲಕ್ಷದಿಂದ 1 ಕೋಟಿ ರೂ. ವರೆಗೆ ಖರ್ಚು ಮಾಡಬೇಕಾಗಿದೆ ಎಂದು ಭಾರತದ ಶಿಕ್ಷಣ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
Kshetra Samachara
15/05/2022 06:46 pm