ಬೆಂಗಳೂರು - ಇನ್ಮುಂದೆ ಶಿಕ್ಷಕರು ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ. ಹೀಗಂತ ನಾವೂ ಹೇಳ್ತಿಲ್ಲ.ಬದಲಾಗಿ ರಾಜ್ಯ ಸರ್ಕಾರವೇ ಹೊಸದೊಂದು ಆದೇಶಕ್ಕೆ ಮುಂದಾಗಿದೆ.
ಹೌದು. ಪ್ರಾಥಮಿಕ ಶಾಲೆ ಒಂದು ಹಾಗೂ ಎರಡನೇ ತರಗತಿಯ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರು ಹೋಂ ವರ್ಕ್ ನೀಡದಂತೆ ಸೂಚನೆಯನ್ನು ನೀಡಲು ಸರ್ಕಾರ ಮುಂದಾಗಿದೆ.
ಈ ವರ್ಷದಿಂದಲೇ ಈ ನಿಯಮ ಜಾರಿಗೆ ಬರಲಿದ್ದು, ನಲಿ- ಕಲಿ ರೀತಿ ಪಾಠ ಮಾತ್ರ ಮಕ್ಕಳಿಗೆ ಕಲಿಸಲು ಸರ್ಕಾರ ನಿರ್ಧರಿಸಿದೆ.ಇನ್ನೂ ಮದ್ರಾಸ್ ಹೈಕೋರ್ಟ್ ಮತ್ತು ಕೇಂದ್ರ ಶಿಕ್ಷಣ ಸಚಿವರ ಹೇಳಿಕೆ ಅನ್ವಯ ಈ ಕ್ರಮ ತೆಗೆದು ಕೊಳ್ಳಲಾಗಿದೆ.ಖಾಸಗಿ ಶಾಲೆಗಳಿಗೂ ಈ ಸೂಚನೆ ಜಾರಿಗೆ ಬಂದಿದ್ದು ಅನ್ವಯ ಕಡ್ಡಾಯ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
PublicNext
05/05/2022 06:24 pm