ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಭಕ್ತ ಕನಕದಾಸರು ಜಾತಿ- ಜನಾಂಗ ಮೀರಿ ನಿಂತ ಮಹಾಚೇತನ"

ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಟಂನಲ್ಲೂರು ಸಮೀಪದ ಜನಪದರು ರಂಗ ಮಂದಿರದಲ್ಲಿ ಕುರುಬ ಸಮಾಜದ ವತಿಯಿಂದ ಸಂತ ಕನಕದಾಸರ 534ನೇ ಜಯಂತ್ಯುತ್ಸವ ಇಂದು ಆಚರಿಸಲಾಯಿತು.

ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ್ ಹಾಗೂ ಪೌರಾಡಳಿತ, ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜ್ , ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಉಪಸ್ಥಿತರಿದ್ದು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಭಕ್ತ ಕನಕದಾಸರು ಯಾವುದೇ ಜಾತಿ-ಜನಾಂಗಕ್ಕೆ ಸೀಮಿತರಾಗದೆ ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ ಮಹಾಪುರುಷರು. ನಾವು ಸಹ ಅಂತಹ ಮಹಾಪುರುಷರ ರೀತಿಯಲ್ಲಿ ಸಮಾಜಕ್ಕಾಗಿ ಬದುಕಬೇಕು ಎಂದರು.

Edited By : Nagaraj Tulugeri
Kshetra Samachara

Kshetra Samachara

27/11/2021 09:35 pm

Cinque Terre

528

Cinque Terre

0

ಸಂಬಂಧಿತ ಸುದ್ದಿ