ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ಇಂದು ಮೊದಲ ಸುತ್ತಿನ ಗ್ರಾಮ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಜಾಪುರದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಬಿಡುಗಪ್ಪ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಇನ್ನು ಗ್ರಾಮಸಭೆಯಲ್ಲಿ 28 ಇಲಾಖೆಗಳ ಪೈಕಿ ಎಂಟು ಇಲಾಖೆ ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು.
ಇನ್ನೂ ಸರ್ಕಾರಿ ಇಲಾಖೆ ಅಧಿಕಾರಿಗಳು ಗೈರಾದ ಹಿನ್ನೆಲೆಯಲ್ಲಿ ಮಾಹಿತಿ ಕೊರತೆಯಿಂದಾಗಿ ಗ್ರಾಮ ಸಭೆಗೆ ಹಳ್ಳ ಹಿಡಿದಿದೆ . ಇನ್ನು ಗ್ರಾಮ ಸಭೆಯಲ್ಲಿ ಬೆಸ್ಕಾಮಾಧಿಕಾರಿಗಳ ನಿರ್ಲಕ್ಷಯಿಂದಾಗಿ ಮಾಹಿತಿ ನೀಡಿದ ಕಾರಣಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿಗಳನ್ನು ಗ್ರಾಮ ಸಭೆಯಿಂದ ಬಹಿಷ್ಕರಿಸಲಾಯಿತು. ಇನ್ನು ಪ್ರಮುಖವಾಗಿ ಸಭೆಯಲ್ಲಿ ಸ್ಮಶಾನ ಒತ್ತುವರಿ ,ಸರ್ಕಾರಿ ಸ್ವಾಮಿದ ಆಸ್ತಿ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚೆ ನಡೆಯಿತು, ಒಟ್ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಡೆಬೇಕಾಗಿದ್ದ ಗ್ರಾಮ ಸಭೆ ಕಾಟಾಚಾರಕ್ಕೆ ನಡೆದಿದೆ ಅಂತ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.
Kshetra Samachara
29/08/2022 10:13 pm