ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಭೂಸ್ವಾಧೀನ ವಿರೋಧಿ ಹೋರಾಟಗಾರರಿಂದ ಸಿಎಂ ಭೇಟಿಗಾಗಿ ಎಸ್ಪಿಗೆ ಅಹವಾಲು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದ 13 ಹಳ್ಳಿಗಳ ರೈತರು 1777 ಎಕರೆ ಭೂಸ್ವಾಧೀನ ಕೈ ಬಿಡಬೇಕೆಂದು ಕಳೆದ 101 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಧರಣಿ, ದೇವನಹಳ್ಳಿ ಬಂದ್ ನಿಂದ ಎಚ್ಚೆತ್ತ ಸರ್ಕಾರ ಮುರುಗೇಶ್ ನಿರಾಣಿ ನೇತೃತ್ವದಲ್ಲಿ MTB ನಾಗರಾಜ್, ಸಂಸದ ಬಚ್ಚೇಗೌಡ ಮತ್ತು ರೈತರ ನಡುವೆ ನಡೆದ ಸಭೆ ವಿಫಲವಾಗಿತ್ತು. ಇದೀಗ ಸಿಎಂ ಬೊಮ್ಮಾಯಿಯವರೇ ನಾಳೆ KIADB ವ್ಯಾಪ್ತಿಯ ನಾಗನಾಯಕನ ಹಳ್ಳಿಯಲ್ಲಿ IFFCO ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ.

ಮುಖ್ಯಮಂತ್ರಿಗಳ ಆಗಮನ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಪೊಲೀಸರು ಬಂದೋಬಸ್ತ್ ಗಾಗಿ ಚನ್ನರಾಯಪಟ್ಟಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಧರಣಿ ನಿರತ ಹೋರಾಟಗಾರರು ಎಸ್ಪಿ ಕೋನ ವಂಶೀಕೃಷ್ಣರನ್ನು ಭೇಟಿಯಾದರು. ನಾಳೆ ಮುಖ್ಯಮಂತ್ರಿಗಳಿಗೆ ಭೂಸ್ವಾಧೀನ ಕೈಬಿಡಲು ಮನವಿ ಸಲ್ಲಿಸುವ ಅವಕಾಶ ಕೋರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ, ಶಾಂತಿಯುತ ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆ ನೀಡಿದರು.

ರೈತರು ಹಾಗೂ ಮುಖ್ಯಮಂತ್ರಿಗಳ ಭೇಟಿ ವೇಳೆ ಏನೆಲ್ಲ ವಿಷಯ ಚರ್ಚೆಯಾಗಲಿವೆ? ಇನ್ನು ಮುಖ್ಯಮಂತ್ರಿಗಳು ರೈತರ ಹೋರಾಟಕ್ಕೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ

Edited By : Nagesh Gaonkar
PublicNext

PublicNext

13/07/2022 10:16 pm

Cinque Terre

44.58 K

Cinque Terre

0

ಸಂಬಂಧಿತ ಸುದ್ದಿ