ಬೆಂಗಳೂರು: 95 ಸಾವಿರ ಮನೆಗಳ ಸಕ್ರಮಕ್ಕೆ ಬಿಡಿಎ ಸರ್ಕಾರಕ್ಕೆ ಶಿಫಾರಸು; 9-10 ಸಾವಿರ ಕೋಟಿ ಆದಾಯ ನಿರೀಕ್ಷೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬಡಾವಣೆಯಲ್ಲಿ ನಿರ್ಮಾಣವಾಗಿರುವ 95 ಸಾವಿರ ಮನೆಗಳನ್ನು 38ಡಿ ಅಡಿಯಲ್ಲಿ ಸಕ್ರಮ ಮಾಡಲು ಬಿಡಿಎ ಮುಂದಾಗಿದೆ.
ಈ ಕುರಿತು ಬಿಡಿಎ ಅಧ್ಯಕ್ಷ ಎಸ್. ಆರ್.ವಿಶ್ವನಾಥ್, ಬಿಡಿಎ ಸ್ವಾಧೀನ ಪಡಿಸಿಕೊಂಡಿರುವ ಪ್ರದೇಶಗಳಲ್ಲಿ 95 ಸಾವಿರ ಮನೆಗಳು ಈಗಾಗಲೇ ನಿರ್ಮಾಣವಾಗಿದೆ. ಆದರೆ, ಈ ಮನೆಗಳನ್ನು ಬಿಡಿಎನಿಂದ ನೋಂದಣಿ ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬಿಡಿಎ ಬಡಾವಣೆಯಲ್ಲಿ 95 ಸಾವಿರ ಮನೆಗಳನ್ನು 38ಡಿ ಅಡಿಯಲ್ಲಿ ಸಕ್ರಮ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಹಿಂದೆ 20*30 ಅಳತೆಯ ನಿವೇಶನಕ್ಕೆ10% 30*40 ಕ್ಕೆ 20% 50*80ಕ್ಕೆ 50% ರಷ್ಟು ಮಾರ್ಗಸೂಚಿ ದರವನ್ನು ಪಾವತಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ, ಸಾರ್ವಜನಿಕರಿಂದ ದರ ಸಾಕಷ್ಟು ಏರಿಕೆ ಬಗ್ಗೆ ದೂರು ಕೇಳಿಬಂದಿತ್ತು. ಹೀಗಾಗಿ ದರವನ್ನು ಪರಿಷ್ಕರಣೆ ಮಾಡಿ10% ದರವನ್ನು ಕಡಿಮೆ ಮಾಡಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಗಮನಕ್ಕೆ ತರಲಾಗಿದೆ. ಇದರಿಂದ ಬಿಡಿಎಗೆ 9-10 ಸಾವಿರ ಕೋಟಿ ರೂ. ಆದಾಯ ಬರಲಿದ್ದು, ಆರ್ಥಿಕ ಸಬಲತೆಗೂ ರಹದಾರಿ. ಆದ್ದರಿಂದ ಕೆಲವೇ ದಿನದಲ್ಲಿ ಸರ್ಕಾರದಿಂದ ಅನುಮೋದನೆ ಸಿಗುವ ಸಾಧ್ಯತೆ ಇದೆ.
Kshetra Samachara
18/05/2022 08:57 pm