ಆರ್‌ಆರ್‌ನಗರ: ನಗರದ ಬಿಎಂಟಿಸಿ ಡಿಪೋ ಮುಂದೆ ನೌಕರ, ಹೊಳೆಬಸಪ್ಪರವರ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಮೃತ ಹೊಳೆಬಸಪ್ಪ ಹೆಂಡತಿ ಇಬ್ಬರು ಮಕ್ಕಳೊಂದಿಗೆ ಧರಣಿ ನಡೆಸುತ್ತಿದ್ದು, ಕೆಆರ್ಎಸ್ ಪಾರ್ಟಿ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತಿಭಟನೆಗೆ ಸಾಥ್ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ನೌಕರರು ಜಮಾಯಿಸಿ ಸ್ಥಳಕ್ಕೆ ಸಾರಿಗೆ ಸಚಿವರು ಬರುವಂತೆ ಪಟ್ಟು ಹಿಡಿದಿದ್ದಾರೆ.
ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಅವರನ್ನು ಬಂಧಿಸಿ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬಿಎಂಟಿಸಿ ನೌಕರ ಆತ್ಮಹತ್ಯೆಗಿಡಾಗಿದ್ರು. ಸೌಜನಕ್ಕೂ ಸಾರಿಗೆ ಸಚಿವ ಶ್ರೀ ರಾಮುಲು, ಬಿಎಂಟಿಸಿ ಎಂಡಿ ಜಿ. ಸತ್ಯವತಿ ಹಾಗೂ ನಂದೀಶ್ ರೆಡ್ಡಿ ಭೇಟಿ ನೀಡಿಲ್ಲ. ಸಾವಿಗೆ ಡಿಪೋ ಮ್ಯಾನೇಜರ್ ಕಾರಣವೆಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ, ಅಲ್ಲದೇ ಅಧಿಕಾರಿಯನ್ನು ಪಕ್ಕದ ಡಿಪೋಗೆ ಶಿಫ್ಟ್ ಮಾಡಿ ಸೇಫ್ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ.
PublicNext
30/08/2022 09:42 pm