ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಮನೆಯಲ್ಲಿ ವಿದೇಶಿ ಕರೆನ್ಸಿ ಮತ್ತು ವಾಚ್ ಕಳ್ಳತನ ಮಾಡಿದ್ದ ಆರೋಪಿಯನ್ನ ಸದಾಶಿವನಗರ ಪೊಲೀಸ್ರು ಒಡಿಶಾದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿ ಜಯಂತ್ ಒಡಿಶಾದ ಬಲಿಚಂದ್ರ ಪುಟ್ ಗ್ರಾಮದ ನಿವಾಸಿಯಾಗಿದ್ದು. ಈ ಬಲಿಚಂದ್ರಪುಟ್ ಗ್ರಾಮ ಸರ್ವೆಂಟ್ ಥೆಫ್ಟ್ ಗೆ ಫೇಮಸ್ ಅಂತೆ. ಈ ಗ್ರಾಮದಿಂದ ಕೆಲಸಕ್ಕೆ ಅಂತ ಬೇರೆ ಬೇರೆ ರಾಜ್ಯಗಳಿಗೆ ಬರೋ ಇವ್ರು ಮಾಲೀಕರ ನಂಬಿಕೆ ಗಳಿಸಿ ಮನೆ ದೋಚಿ ಪರಾರಿಯಾಗ್ತಾರೆ.
ಇನ್ನೂ ಆರೋಪಿ ಜಯಂತ್ ಮಾರತ್ ಹಳ್ಳಿಯಲ್ಲಿ ವಿದೇಶಿ ಕರೆನ್ಸಿಯನ್ನು ನಕಲಿ ದಾಖಲಾತಿ ಕೊಟ್ಟು ವಿನಿಮಯ ಮಾಡಿಕೊಂಡು ವಿಮಾನದಲ್ಲಿ ಒಡಿಶಾಗೆ ಹಾರಿದ್ದ. ಸದ್ಯ ಈತನ ವಿಚಾರಣೆ ನಡೆಸ್ತಿದ್ದು ವಿದೇಶಿ ಕರೆನ್ಸಿ ಮೌಲ್ಯ 70 ಸಾವಿರ ಎಂದು ಅಂದಾಜಿಸಲಾಗಿದ್ದು, ವಾಚ್ ಬೆಲೆ 50 ಸಾವಿರ ಮೌಲ್ಯದ್ದು ಎಂದು ತಿಳಿದು ಬಂದಿದೆ. ಇನ್ನೂ ವಿದೇಶಿ ಕರೆನ್ಸಿ ವಿನಿಮಯ ಮಾಡಿಕೊಂಡ ವ್ಯಕ್ತಿಯನ್ನು ಪೊಲೀಸ್ರು ವಿಚಾರಣೆ ನಡೆಸಲು ಮುಂದಾಗಿದ್ದಾರೆ.
PublicNext
01/08/2022 08:51 pm