ಬೆಂಗಳೂರು : ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಲಾಠಿ ಜಾರ್ಜ್ ವಿಚಾರವಾಗಿ ವಿವಿ ಕುಲಪತಿ ಪ್ರೋ.ವೇಣುಗೋಪಾಲ ಕೆ.ಆರ್. ಮಾತನಾಡಿ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಫಲಿತಾಂಶ ವಿಳಂಬ ಹಿನ್ನೆಲೆಯಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮತ್ತೊಂದು ಕಡೆ ವಿವಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆಯೂ ನಡೆಯುತ್ತಿದೆ. ಸದ್ಯ ಎರಡು ಸಂಘಟನೆಗಳ ಪ್ರತಿಭಟನೆಯಿಂದಾಗಿ ಗಲಾಟೆ ನಡೆದಿದೆ. ಈ ವೇಳೆ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಜಾರ್ಜ್ ಮಾಡಿರುವ ಗಮನಕ್ಕೆ ಬಂದಿದೆ.
ಆದ್ರೆ ವಿದ್ಯಾರ್ಥಿಗಳು ನೇರವಾಗಿ ಫಲಿತಾಂಶ ವಿಳಂಭದ ಬಗ್ಗೆ ನನ್ನ ಗಮನಕ್ಕೆ ತರಬಹುದಿತ್ತು. ಇನ್ನೊಂದು ವಾರದಲ್ಲಿ ದೂರ ಶಿಕ್ಷಣ ಪಿಜಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟಿಸುತ್ತೇವೆ. ಆದ್ರೆ ವಿವಿ ಆವರಣದಲ್ಲಿ ರಾಜಕೀಯತೇರ ವಿದ್ಯಾರ್ಥಿ ಸಂಘಟನೆಗಳಿಗೆ ಅವಕಾಶ ಇಲ್ಲ.ವಿದ್ಯಾರ್ಥಿಗಳಿಗೆ ಸಮಸ್ಯೆ ಆದ್ರೆ ನೇರವಾಗಿ ಬಂದು ಕೇಳಬಹುದು.ಪ್ರತಿಭಟನೆ ನಡೆಸುವ ವಿಚಾರದಲ್ಲಿ ಯಾವುದೇ ಅನುಮತಿ ಪಡೆದಿರಲ್ಲ ಎಂದು ಹೇಳಿದ್ದಾರೆ.
PublicNext
31/01/2022 03:57 pm