ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಪಡೆಯದವರಿಗೆ ಲಾಕ್ ಡೌನ್ ಗೆ ಸರ್ಕಾರ ಚಿಂತನೆ - ಅಶ್ವಥ್ ನಾರಾಯಣ್

ಬೆಂಗಳೂರು: ಜರ್ಮನಿ ಮಾದರಿಯಲ್ಲಿ ರಾಜ್ಯದಲ್ಲಿ ಲಸಿಕೆ ಪಡೆಯದವರಿಗೆ ಲಾಕ್ ಡೌನ್ ಘೋಷಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಶ್ವಥ್ ನಾರಾಯಣ್ ಸುಳಿವು ಕೊಟ್ಟಿದ್ದಾರೆ.

ಲಸಿಕೆ ಪಡೆಯದವರಿಗೆ ಸರ್ಕಾರದ ಕಟ್ಟು ನಿಟ್ಟಿನ ಚಿಂತನೆಗಳು ಮಾಡುವ ಅನಿವಾರ್ಯವಾಗಿದೆ.

ಏರ್ ಪೋರ್ಟ್, ರೈಲ್ವೆ ನಿಲ್ದಾಣ, ಮೆಟ್ರೊ, ಬಸ್ ಗಳಲ್ಲಿ ಪ್ರವೇಶ ನಿಷೇಧಿಸಲಾಗಿದೆ.ಕಚೇರಿಗೆ ಹೋಗುವಂತಿಲ್ಲ.ನೌಕರರು ಲಸಿಕೆ ಪಡೆಯದೆ ಕಚೇರಿಗೆ ಬಂದರೆ, ಸಂಸ್ಥೆಯ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪೋಷಕರಿಗೆ ಲಸಿಕೆ ಆಗಿದ್ದರೆ ಮಾತ್ರ ಶಾಲೆಗೆ ಮಕ್ಕಳನ್ನು ಕಳಿಸಬಹುದು. ಮಾಲ್ಗಳಿಗೆ , ಚಿತ್ರಮಂದಿರಗಳಿಗೆ , ಉದ್ಯಾನ ವನ , ಪ್ರೇಕ್ಷಣೀಯ ಸ್ಥಳಗಳು, ಸರ್ಕಾರಿ ಕಚೇರಿಗಳು,ಮದುವೆ ಸಮಾರಂಭ, ನಾಮಕರಣ, ಸಮಾರಂಭಗಳಲ್ಲಿ ಎರಡು ಡೋಸ್ ಪಡೆದಿರುವ ಬಗ್ಗೆ ಸರ್ಟಿಫಿಕೇಟ್ ತೋರಿಸಬೇಕು.

ಟ್ಯಾಕ್ಸಿ, ಆಟೋ ಸೇವೆ ಪಡೆಯುವುದಕ್ಕೆ, ಎಪಿಎಂ ಸಿ ಮಾರುಕಟ್ಟೆಯಲ್ಲಿ ವರ್ತಕರು ಮತ್ತು ರೈತರು,‌ಬಾರ್, ಪಬ್ , ರೆಸ್ಟೋರೆಂಟ್ ಗಳಲ್ಲಿ ಕೂಡ ಎರಡೂ ಡೋಸ್ ಸರ್ಟಿಫಿಕೇಟ್ ತೋರಿಸಲೇಬೇಕು.

ರಾಜ್ಯದಲ್ಲಿ ಇನ್ನೂ ೪೦ ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮದ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಐಟಿ ಬಿಟಿ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

03/12/2021 04:10 pm

Cinque Terre

466

Cinque Terre

0

ಸಂಬಂಧಿತ ಸುದ್ದಿ