ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಮಿತ್ ಶಾ ಕಾರ್ಯಕ್ರಮದ ಪಕ್ಕದಲ್ಲೇ ಸ್ಪೋಟದ ಶಬ್ಧ: ಸ್ಥಳೀಯರಲ್ಲಿ ಆತಂಕ

ಬೆಂಗಳೂರು: ನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಇದ್ದಕ್ಕಿಂದ್ದಂತೆ ಸ್ಫೋಟ ಶಬ್ದ ಕೇಳಿಸಿದೆ. ಅಮಿತ್ ಷಾ ಕಾರ್ಯಕ್ರಮದ ಕೂಗಳತೆ ದೂರದಲ್ಲೇ ಸ್ಫೋಟದ ಶಬ್ಧ ಆತಂಕ ಮೂಡಿಸಿತ್ತು. ನಂತರ ಖುದ್ದು ಕಮಿಷನರ್ ಕಮಲ್ ಪಂತ್ ಘಟನಾ ಸ್ಥಳಕ್ಕೆ ಬಂದು ಘಟನೆಯ ಮಾಹಿತಿ ಪಡೆದಿದ್ದಾರೆ.

ಮೌಂಟ್ ಕಾರ್ಮಲ್ ಕಾಲೇಜು ಮುಂಭಾಗದ ಎಲೆಕ್ಟ್ರಿಕ್ ಕಂಬದಲ್ಲಿ ಬೆಂಕಿ ಕಾಣಿಸಿಕೊಂಡು ಶಬ್ಧ ಉಂಟಾಗಿತ್ತು. ಬೆಂಕಿಯಿಂದ ದಟ್ಟ ಹೊಗೆ ಆವರಿಸಿ ಕೆಲಕಾಲ ಆತಂಕಕ್ಕೆ ಎಡೆಮಾಡಿ ಕೊಟ್ಟಿತ್ತು. ಪರಿಶೀಲನೆ ನಡೆಸಿದಾಗ ವೈರ್ ನಲ್ಲಿ ಶಾಕ್‌ ಸರ್ಕ್ಯೂಟ್‌ನಲ್ಲಿ ಕಾಣಿಸಿಕೊಂಡಿದ್ದು ಬೇರೆ ಏನೂ ಆಗಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಸ್ಪಷ್ಪಪಡಿಸಿದ್ದಾರೆ.

ಹೆಚ್‌ಎಎಲ್‌ ವಿಮಾನ ನಿಲ್ದಾಣದಿಂದ‌ ಪ್ಯಾಲೇಸ್ ರಸ್ತೆಯಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸುವಾಗ ಮೌಂಟ್ ಕಾರ್ಮೆಲ್ ಕಾಲೇಜು ಬಳಿ ಈ ಅವಾಂತರ ನಡೆದಿದೆ‌. ಎಲೆಕ್ಟ್ರಿಕಲ್ ವೈರ್ ಮೇಲೆ‌ ಕಾರು ಹರಿದಿದ್ದರಿಂದ ಏಕಾಏಕಿ ವೈರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಕಾಣಿಸಿಕೊಂಡಿದೆ. ಇದರಿಂದ‌ ಸ್ಥಳೀಯರು ಆತಂಕಗೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕರೆಂಟ್ ಶಾರ್ಟ್ ಸರ್ಕ್ಯೂಟ್‌ನಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

Edited By : Shivu K
PublicNext

PublicNext

01/04/2022 06:41 pm

Cinque Terre

28.94 K

Cinque Terre

8

ಸಂಬಂಧಿತ ಸುದ್ದಿ