ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಸಮೃದ್ಧಿ ಫೌಂಡೇಶನ್ ನಿಂದ ಸರ್ಕಾರಿ ಶಾಲೆಯ ಆವರಣ ಸ್ವಚ್ಚತೆ

ಬೆಂಗಳೂರು: ಹೊರಮಾವು ಸಮೀಪದ ಜಯಂತಿನಗರ ಸರ್ಕಾರಿ ಶಾಲೆಯ ಆವರಣ ಹಾಗೂ ಹೊರಮಾವು ಕೆರೆಯ ಅಂಗಳದಲ್ಲಿ ಶ್ರೀ ಸಮೃದ್ಧಿ ಫೌಂಡೇಶನ್ ಕಾರ್ಯಕರ್ತರು ಗಿಡ ನೆಡುವ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿದರು.

ಶ್ರೀ ಸಮೃದ್ಧಿ ಫೌಂಡೇಶನ್ ತಂಡದ ಕಾರ್ಯಕರ್ತರು ಬೆಳಿಗ್ಗೆ 8 ಗಂಟೆಯಿಂದ ಜಯಂತಿನಗರ ಸರ್ಕಾರಿ ಶಾಲೆಯ ಆವರಣದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ನಂತರ ಹೊರಮಾವು ಕೆರೆ ಹಾಗೂ ಶಾಲೆಯ ಆವರಣದಲ್ಲಿ ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಹೊಣೆ ಹೊತ್ತರು.

ನಟ, ಫ್ಯಾಷನ್ ವಿನ್ಯಾಸಕ, ಕೊವಿಡ್ ಮಿತ್ತಲ್‌ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ಬೆಂಗಳೂರು ನಗರ ಇತರ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿನ ಪ್ರಕೃತಿ ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ.‌ ನಗರದ ಸೌಂದರ್ಯಕ್ಕೆ ಪರಿಸರವನ್ನು ಉಳಿಸಲು ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕು. ಮಕ್ಕಳಿಗೆ ತರಗತಿಯಲ್ಲಿ ಮಾತ್ರ ಪರಿಸರದ ಪಾಠ ಹೇಳದೆ ಬಿಡುವಿನ ವೇಳೆಯಲ್ಲಿ ಪ್ರಾಯೋಗಿಕವಾಗಿ ಗಿಡ ನೆಡುವ ಹಾಗೂ ಸಾರ್ವಜನಿಕ ಸ್ಥಳಗಳನ್ನು ಸುಂದರವಾಗಿಟ್ಟುಕೊಳ್ಳವ ರೂಢಿ ಮಾಡಿಸಬೇಕು ಎಂದರು.

ಶ್ರೀ ಸಮೃದ್ಧಿ ಫೌಂಡೇಶನ್ ಅಧ್ಯಕ್ಷೆ ಭಾರತಿ ರಾಜೇಶ್, "ಹೊರಮಾವು ಕೆರೆ ಹಾಗೂ ಸರ್ಕಾರಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ ಇನ್ನೂರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ" ಎಂದು ಹೇಳಿದರು.

ಶ್ರೀ ಸಮೃದ್ಧಿ ಫೌಂಡೇಶನ್ ನ ಯುವ ಘಟಕವನ್ನು ಉದ್ಘಾಟಿಸಿ ಜವಾಬ್ದಾರಿ ವಹಿಸಲಾಯಿತು. ರೇವಾ ವಿಶ್ವವಿದ್ಯಾಲಯ, ಜೈನ್ ಕಾಲೇಜು, ಕ್ರೈಸ್ಟ್ ಕಾಲೇಜು, ಇಂಡೋ ಏಷಿಯನ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Edited By : PublicNext Desk
Kshetra Samachara

Kshetra Samachara

15/07/2022 10:05 pm

Cinque Terre

1.19 K

Cinque Terre

0

ಸಂಬಂಧಿತ ಸುದ್ದಿ