ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯುಜಿಡಿ ಕಾಮಗಾರಿ ಮುಗಿದರೂ, ರಸ್ತೆಗಳಿಗಿಲ್ಲ ಡಾಂಬರು ಭಾಗ್ಯ

ಬೆಂಗಳೂರು: ಮಹದೇವಪುರ ಕ್ಷೇತ್ರದ ಹಗದೂರು ವಾರ್ಡನ ನಲ್ಲೂರಹಳ್ಳಿಯ ಅಮೃತಾ ವ್ಯಾಲ್ಯೂ ಬ್ಲಾಕ್ 3ರ ಮುಖ್ಯರಸ್ತೆಯಲ್ಲಿನ ಯುಜಿಡಿ ಕಾಮಗಾರಿ ಮುಗಿದು ತಿಂಗಳುಗಳೇ ಕಳೆದ್ರೂ ರಸ್ತೆಗೆ ಡಾಂಬರೀಕರಣ ಮಾತ್ರ ಇನ್ನೂ ಕೈಗೊಂಡಿಲ್ಲ.

ಹೌದು ದೃಶ್ಯಗಳಲ್ಲಿ ಗಮನಿಸುತ್ತಿರುವ ಹಾಗೇ ಇಡೀ ರಸ್ತೆಗಳು ಗುಂಡಿಮಯವಾಗಿದೆ.. ಇದಕ್ಕೆಲ್ಲ ಕಾರಣ ಯುಜಿಡಿ ಒಳಚರಂಡಿ ಕಾಮಗಾರಿ.

ಯುಜಿಡಿ ಕಾಮಗಾರಿ ಮುಗಿದು ತಿಂಗಳುಗಳೇ ಕಳೆದಿದ್ದರೂ ಅಧಿಕಾರಿಗಳು ಮಾತ್ರ ರಸ್ತೆ ದುರಸ್ತಿಗೊಳಿಸುವಲ್ಲಿ ವಿಫಲರಾಗಿದ್ದಾರೆ.ಇದರ ಪರಿಣಾಮ ಇಡೀ ರಸ್ತೆಗಳು ಗುಂಡಿಮಯವಾಗಿದ್ದು ಮಳೆ ಬಂದ ಸಂದರ್ಭದಲ್ಲಿ ವಾಹನ ಸವಾರರು ಯಾತನೆ ಪಡುವಂಥ ಸ್ಥಿತಿ ಇಲ್ಲಿನ ರಸ್ತೆಗಳಲ್ಲಿ ನಿರ್ಮಾಣವಾಗುತ್ತದೆ.

Edited By : PublicNext Desk
Kshetra Samachara

Kshetra Samachara

16/06/2022 12:03 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ