ದೊಡ್ಡಬಳ್ಳಾಪುರ: ಭಾರತ ಸೇವಾ ದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಜಿ.ಲಕ್ಷ್ಮೀಪತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಭಾರತ ಸೇವಾ ದಳದ ಜಿಲ್ಲಾ ಸಂಘಟಕ ಹಾಗೂ ಚುನಾವಣಾಕಾರಿ ಇ. ಅರುಣ ತಿಳಿಸಿದರು.
ಜಿಲ್ಲಾ ಸಮಿತಿ ಉಪಾಧ್ಯಕ್ಷರಾಗಿ ಕೆ.ಸಿ.ಸುರೇಶ್, ಕಾರ್ಯದರ್ಶಿಯಾಗಿ ಬಿ.ಪುಟ್ಟಸ್ವಾಮಿ, ಕೋಶಾಧ್ಯಕ್ಷರಾಗಿ ಎನ್.ಆರ್.
ಹೊನ್ನಸಿದ್ದಯ್ಯ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಆರ್.ರವಿಕುಮಾರ್ ಅವರು ಆಯ್ಕೆಯಾಗಿದ್ದಾರೆ ಎಂದು ಮಂಗಳವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಪ್ರಕಟಿಸಿದರು.
ಪದಾಧಿಕಾರಿಗಳು ಅವಧಿ 2022 ರಿಂದ 2027ರ ವರೆಗೆ ಇರಲಿದೆ. ಗ್ರಾಮಾಂತರ ಜಿಲ್ಲಾ ಸಮಿತಿಗೆ ಜೂನ್ 29ರಂದು ನಡೆದ ಚುನಾವಣೆಯಲ್ಲಿ ಜಿಲ್ಲಾ ಸಮಿತಿಯ 15 ಸ್ಥಾನಗಳಿಗೆ 13 ಜನರು ಆಯ್ಕೆಯಾಗಿದ್ದು, ಶಿಕ್ಷಕ, ಶಿಕ್ಷಕಿ ಕ್ಷೇತ್ರದ ಇಬ್ಬರು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಸಮಿತಿ ಸದಸ್ಯರಾಗಿ, ವಿ.ಎನ್.ಬ್ಯಾಟೇಗೌಡ, ಸಿ.ಬೊಮ್ಮಕ್ಕ, ಬಿ.ಕೆ.ದಿನಕರ್, ಎಂ.ದೇವರಾಜು, ಎಂ.ಮುನಿರಾಜು, ಟಿ.ಕೆ.ಸಾವಿತ್ರಮ್ಮ, ಎಸ್.ಪಿ.ವೆಂಕಟಾಚಲಯ್ಯ, ವೆಂಕಟರಮಣಸ್ವಾಮಿ, ಪರಮೇಶ್ವರಯ್ಯ(ಸ.ಶಿ), ಸುಮೀತ(ಸ.ಶಿ) ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಜಿ.ಲಕ್ಷ್ಮೀಪತಿ ಮಾತನಾಡಿ, ಸೇವಾದಳದ ಧ್ಯೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ವಾರ್ಷಿಕವಾಗಿ ಐದು ಶಿಬಿರಗಳನ್ನು ಆಯೋಜಿಸಲಾಗುವುದು. ಪ್ರತಿ ಶಾಲೆಗಳಲ್ಲಿ ಸೇವಾದಳ ಘಟಕಗಳನ್ನು ಸ್ಥಾಪಿಸಲು ಡಿಡಿಪಿಐ ಅವರೊಂದಿಗೆ ಚರ್ಚಿಸಿಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ಎನ್‍ಸಿಸಿ, ಎನ್‍ಎಸ್‍ಎಸ್ ಮಾದರಿಯಲ್ಲಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸಲಾಗುವುದು. ವರ್ಷಕ್ಕೆ 2 ಬಾರಿ ಸರ್ವ ಸದಸ್ಯರ ಸಭೆ ಕರೆಯಲಾಗುವುದು. ಸೇವಾದಳ ಭವನ ನಿರ್ಮಾಣಕ್ಕೆ 50 ಲಕ್ಷ ರೂ ಅನುದಾನ ದೊರೆತಿದ್ದು, ನಿವೇಶನ ಕೊರತೆಯಿಂದ ವಿಳಂಬವಾಗಿತ್ತು. ಈಗ ಜಿಲ್ಲಾಕಾರಿಗಳ ಕಚೇರಿ ಎದುರು 80*100 ಅಳತೆಯ ನಿವೇಶನವಿದ್ದು, ಇಲ್ಲಿ ಸೇವಾದಳ ಭವನ ನಿರ್ಮಾಣ ಮಾಡಲಾಗುವುದು ಎಂದರು.
ಸಭೆಯಲ್ಲಿ ಸೇವಾದಳದ ದೊಡ್ಡಬಳ್ಳಾಪುರ ತಾಲೂಕು ಘಟಕದ ಅಧ್ಯಕ್ಷ ನಂಜುಂಡೇಗೌಡ, ಹೊಸಕೋಟೆ ಅಧ್ಯಕ್ಷ ಹರೀಶ್ ಗೌಡ, ದೇವನಹಳ್ಳಿ ಅಧ್ಯಕ್ಷ ಶ್ರೀನಿವಾಸ್ ಗೌಡ ಸೇರಿ ಇತರ ಮುಖಂಡರು ಭಾಗವಹಿಸಿದ್ದರು.
Kshetra Samachara
06/07/2022 09:32 am