ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೊಮ್ಮನಹಳ್ಳಿ :ಪುನೀತ್ ಹುಟ್ಟುಹಬ್ಬ ಆಚರಣೆ

ಬೊಮ್ಮನಹಳ್ಳಿ :ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಖಿಲ ಕರ್ನಾಟಕ ಡಾ.ರಾಜ್ ಕುಮಾರ್ ಅಭಿಮಾನಿ ಸಂಘ ವತಿಯಿಂದ ಬಿ.ಕೆ.ಎಲ್ ಬಿಲ್ಡಿಂಗ್ ಹಮ್ಮಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಯಿತು.

ಇಲ್ಲಿನ ಹೊಸೂರು ಮುಖ್ಯ ರಸ್ತೆಯಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಅನಾವರಣಗೊಳಿಸಲಾಯಿತು.ಅಲ್ಲದೆ ಅಪ್ಪು ಬಾಳಿದ ರೀತಿ ಅದ್ಭುತ ಮತ್ತು ಆದರ್ಶಪ್ರಾಯ. ಅವರು ಸಮಾಜಕ್ಕೆ ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ ಅವರ ಜನ್ಮ ಜಯಂತಿಯಂದು ಅರ್ಥಪೂರ್ಣವಾಗಿ ಮಾಡಲಾಯಿತು.

ಈ ಕಾರ್ಯಕ್ರದಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸೈಯದ್ ಸಲಾಂ ಚಲನಚಿತ್ರ ನಟರಾದ ಮಯೂರ್ ಪಟೇಲ್ ಸಂಘದ ಪದಾಧಿಕಾರಿಗಳು, ಬಿಜೆಪಿ ಮುಖಂಡರು, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

17/03/2022 09:59 pm

Cinque Terre

758

Cinque Terre

0

ಸಂಬಂಧಿತ ಸುದ್ದಿ