ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 11 ವರ್ಷದ ಕಾಡೆಮ್ಮೆ ಸಾವನ್ನಪ್ಪಿದೆ. ದಿಢೀರ್ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇನ್ನು 11 ವರ್ಷದ ಕುಮಟಾ ಎಂಬ ಹೆಸರಿನ ಕಾಡೆಮ್ಮೆಯನ್ನು 2012ರಲ್ಲಿ ಮೈಸೂರಿನ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಪಾರ್ಕ್ ನಿಂದ ಕರೆತರಲಾಗಿತ್ತು . 2017ರಿಂದ 4 ಕರುಗಳಿಗೆ ಜನ್ಮ ನೀಡಿತು. ಇನ್ನು ಸಸ್ಯಹಾರಿ ಸಫಾರಿಯಲ್ಲಿ ಜೀರ್ಣವಾಗದ ಆಹಾರವನ್ನು ಸೇವಿಸಿ ಸಾವನ್ನಪ್ಪಿರುವುದು ಎಂಬ ಶಂಕೆ ವ್ಯಕ್ತವಾಗಿದೆ. ಇನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಾವಿಗೆ ಏನು ಕಾರಣ ಎಂಬುದನ್ನು ತಿಳಿಯಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಬನ್ನೇರುಘಟ್ಟ ಬಯೊಲಾಜಿಕಲ್ ವೈದ್ಯ ಉಮಾಶಂಕರ್ ಮಾಹಿತಿ ನೀಡಿದರು.
Kshetra Samachara
22/06/2022 05:02 pm