ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿ ಇಲ್ಲಿಗಲ್‌ ಕನ್‌ ಸ್ಟ್ರಕ್ಷನ್‌ !; ಉದ್ಯಾನವನ ಆಗಲಿ ಮನೋಲ್ಲಾಸ ತಾಣ

ಬೆಂಗಳೂರು: ಸಿಲಿಕಾನ್ ಸಿಟಿಯ‌ ಸಸ್ಯಕಾಶಿ ಅಂದ್ರೆ, ಅದು ಕಬ್ಬನ್ ಪಾರ್ಕ್ ಮತ್ತು‌ ಲಾಲ್‌ ಭಾಗ್. ಸಿಟಿ ಮಂದಿ ಬೆಳಗಾದ್ರೆ ಸಾಕು-‌ ಸಂಜೆಯಾದ್ರೆ ಸಾಕು‌, ವಾಕ್ ಮಾಡ್ತಾ ಪರಿಸರವನ್ನ ಎಂಜಾಯ್ ಮಾಡ್ತಿರ್ತಾರೆ.

ಕಬ್ಬನ್ ಪಾರ್ಕ್ ನಲ್ಲಂತೂ, ಈ ಹಿಂದಿನಿಂದಲೂ ಕಾನೂನು ಬಾಹಿರ ಚಟುವಟಿಕೆ ನಡೀತಾನೆ ಇತ್ತು! ವೇಶ್ಯಾವಾಟಿಕೆ, ಕಳ್ಳತನ, ಹುಡುಗಿಯರನ್ನು ಚುಡಾಯ್ಸೋದು ಹೆಚ್ವಾಗಿತ್ತು. ಆದ್ರೆ, ಇದಕ್ಕೆಲ್ಲ ಸದ್ಯಕ್ಕೆ ಕಡಿವಾಣ ಬಿದ್ಧಿದೆ. ಯಾಕಂದ್ರೆ, ಗಟ್ಟಿಮುಟ್ಟಾದ ಗೇಟ್ ಗಳನ್ನ ನಿರ್ಮಿಸಿ ಕಬ್ಬಿಗಳನ್ನ ಕಟ್ಟಿದ್ದಾರೆ. ಯಾರೂ ಸೆಕ್ಯೂರಿಟಿ ಫರ್ಮಿಷನ್ ಇಲ್ಲದೆ ಒಳಗಡೆ ಹೋಗೋಕೆ ಆಗಲ್ಲ.

ಆದ್ರೆ ಬೇಲಿನೇ ಎದ್ದು, ಹೊಲ ಮೇಯ್ಯೋದು ಅಂತಾರಲ್ಲ, ಅದು ಇದೇ ಅನ್ನಿಸುತ್ತೆ. ಸೆಕ್ಯೂರಿಟಿಗಳಿಗೆ ಹಣ ಕೊಟ್ಟು ಒಳಗಡೆ ಹೋಗಿ ಅಲ್ಲಿ ಯಾವುದೇ ಫರ್ಮಿಷನ್ ಇಲ್ಲದೆ ಕನ್‌ ಸ್ಟ್ರಕ್ಷನ್ ಮಾಡ್ತಿದ್ದಾರೆ. ಆರ್ಟಿಕಲ್ ಡಿಪಾರ್ಟ್ ಮೆಂಟ್ ನವ್ರು ಕೂಡ ತಲೆ ಕೆಡಿಸಿಕೊಳ್ತಿಲ್ಲ! ಕಾಲ್ನಡಿಗೆದಾರರು ಕೇಳಿದ್ರೆ ಯಾರೂ ಕ್ಯಾರೇ ಅಂತಿಲ್ಲ. ಈಗಾಗ್ಲೇ ಸ್ವಿಮ್ಮಿಂಗ್ ಪೂಲ್ ಗಳನ್ನ ಕಟ್ಟಿ ಈಗ‌ ಬಿಲ್ಡಿಂಗ್ ಕಟ್ಟಲು ಟೆನ್ನಿಸ್ ಅಸೋಸಿಯೇಷನ್ ನವ್ರು ಮುಂದಾಗಿದ್ದಾರೆ. ಈ ಬಗ್ಗೆ ಕೋರ್ಟ್ ನಲ್ಲಿ ಕೇಸ್ ನಡಿತಿದ್ರೂ ತಲೆ ಕೆಡಿಸಿಕೊಳ್ದೆ, ಕಬ್ಬನ್ ಪಾರ್ಕ್ ನೊಳಗೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ‌ ಬಗ್ಗೆ ಕಬ್ಬನ್ ಪೊಲೀಸ್ ಠಾಣೆಗೆ ಪಾರ್ಕ್ ಕಾಲ್ನಡಿಗೆದಾರರು ಮತ್ತು ಪಿಆರ್ ಒ ದೂರು ನೀಡಿದ್ದಾರೆ. ಡಿಸಿಪಿ, ಕಮಿಷನರ್ ಗೂ ದೂರು‌ ನೀಡಿದ್ದು, ಈ ಬಗ್ಗೆ ಮುಂದೆ ಪೊಲೀಸ್ ಕ್ರಮ ಏನಿರುತ್ತೆ, ಕಾನೂನು ಇದಕ್ಕೆ ಹೇಗೆ ಉತ್ತರ ನೀಡುತ್ತೆ, ಇದಕ್ಕೆಲ್ಲ ಯಾವಾಗ ಕಡಿವಾಣ ಬೀಳುತ್ತೆ, ಕಾದು ನೋಡೋಣ..

ರಂಜಿತ, ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By :
PublicNext

PublicNext

19/03/2022 07:46 pm

Cinque Terre

44.88 K

Cinque Terre

0

ಸಂಬಂಧಿತ ಸುದ್ದಿ