ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: PSI ನೇಮಕಾತಿ ಅಕ್ರಮ: ತಪ್ಪಿತಸ್ಥರು ಲೈಫ್ ಟೈಮ್ PSI ಆಗಿಲ್ಲ; ಡಿಜಿ ಖಡಕ್ ವಾರ್ನ್

ಬೆಂಗಳೂರು:ಪಿ.ಎಸ್.ಐ ನೇಮಕಾತಿ ತಪಿಸ್ಥರು ಲೈಫ್ ಟೈಮ್ ಪಿಎಸ್‌ಐ ಆಗೋದೇ ಇಲ್ಲ. ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಡಕ್ ಆಗಿಯೇ ಹೇಳಿದ್ದಾರೆ.

ಈ ಸಂಬಂಧ ನಮ್ಮ ಪೊಲೀಸ್ರಿಗೆ ಮಾಹಿತಿ ಬಂದಿದೆ. ಆ ಕೂಡಲೇ ಈ ಬಗ್ಗೆ 1 ತಿಂಗಳು ವಿಚಾರಣೆ ನಡೆಸಿದ್ದಾರೆ.ವಿಚಾರ ಗಮನಕ್ಕೆ ಬಂದು ಎವಿಡೆನ್ಸ್ ಸಿಕ್ಕ ತಕ್ಷಣ ಒಂದು ಗಂಟೆ ಸಹ ಕಾಯದ ಎಫ್ ಐ ಅರ್ ದಾಖಲು ಮಾಡಿದ್ದೇವೆ.

ಯಾರು ಸೆಲೆಕ್ಟ್ ಅಗಿದ್ದಾರೆ, ಯಾರು ಸೆಲೆಕ್ಟ್ ಆಗಿಲ್ಲ. ಎಲ್ಲದರ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ.ಯಾರೆಲ್ಲಾ ಮ್ಯಾನುಪ್ಲೇಟ್ ಮಾಡಿದ್ದಾರೆ. ಅವರ ಮೇಲೆ ಕಠಿಣ ಕ್ರಮ ಆಗುತ್ತೆ.ಈಗಾಗಲೇ ಹಲವರನ್ನ ಅರೆಸ್ಟ್ ಮಾಡಲಾಗಿದೆ.

ಎಕ್ಸಾಮ್ ಸೆಂಟರ್ ನಲ್ಲಿ ಮ್ಯಾನುಪ್ಲೇಷನ್ ಮಾಡಿದವ್ರನ್ನ ಲೈಫ್ ಲಾಂಗ್ ಡಿಸ್ಕ್ವಾಲಿಫೈ ಮಾಡಿ ನೆಕ್ಸ್ಟ್ ಅವ್ರು ಯಾವ ಎಕ್ಸಾಮ್ ಬರೆಯದಂತೆ ಮಾಡ್ತೀವಿ.ಯಾರನ್ನೂ ಹಾಗೆ ಬಿಡಲ್ಲಾ. ಪ್ರತಿಯೊಂದು ಅನ್ಸರ್ ಶೀಟ್ ಮೂರು ಬಾರಿ ಚೆಕ್ ಮಾಡಲಿದ್ದೇವೆ.ಪ್ರಾಮಾಣಿಕ ವಾಗಿ ಪರೀಕ್ಷೆ ಬರೆದವರಿಗೆ ಏನು ಆಗಲ್ಲ.ಅದ್ರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ ಎಂದು ಡಿಜಿ ಪ್ರವೀಣ್ ಸೂದ್ ಖಡಕ್ ಆಗಿಯೇ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

22/04/2022 03:08 pm

Cinque Terre

26.2 K

Cinque Terre

0

ಸಂಬಂಧಿತ ಸುದ್ದಿ