ಬೆಂಗಳೂರು: ಬೆಂಗಳೂರು ನಗರದ ಪೊಲೀಸ್ ಆಯುಕ್ತರನ್ನಾಗಿ ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಯಾವುದೇ ಗುರುತರ ಆರೋಪಗಳು ಅಥವಾ ವಿವಾದಗಳು ಇಲ್ಲದೆ ಹೋದರೂ ನಗರ ಪೊಲೀಸ್ ಆಯುಕ್ತರಾಗಿ 20 ತಿಂಗಳ ಅವಧಿ ಮುಗಿಸಿರುವ ಕಾರಣಕ್ಕೆ ಕಮಲ್ ಪಂತ್ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಕಮಲ್ ಪಂತ್ ಅವರ ಸ್ಥಾನಕ್ಕೆ ಪ್ರತಾಪ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಇನ್ನು ಅಲೋಕ್ ಕುಮಾರ್ ಅವರನ್ನು ಕಾನೂನು ಸುವ್ಯವಸ್ಥೆ ಎಡಿಜಿಪಿ, ಹಿತೇಂದ್ರ ಆರ್ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿಯಾಗಿ ಹಾಗೂ ಎಂ.ಎನ್ ಅನುಚೇತ್ ಅವರನ್ನು ಸಿಐಡಿ ಎಸ್‌ಪಿಯಾಗಿ ನೇಮಕ ಮಾಡಲಾಗಿದೆ.
PublicNext
16/05/2022 06:48 pm