ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿದ್ದ ರಸ್ತೆಗಳನ್ನು ಅಗೆದು ಓಎಫ್ಸಿ ಡಕ್ಟ್ (OFC Duct) ಗಳನ್ನು ಅಳವಡಿಸಿ ಪಾಲಿಕೆಗೆ ಟೆಲಿಕಾಂ ಸಂಸ್ಥೆಗಳು ಹತ್ತಾರು ಕೋಟಿ ರೂಪಾಯಿಗಳ ನಷ್ಟ ಉಂಟುಮಾಡಿವೆ.
ಕೇವಲ ಮೂರ್ನಾಲ್ಕು ಅಡಿಗಳಷ್ಟು ಅಗಲದ ಪಾದಚಾರಿ ಮಾರ್ಗಗಳಲ್ಲಿ TRAI ನ ನಿಯಮಗಳನ್ನು ಗಾಳಿಗೆ ತೂರಿ ನೂರಾರು ಅನಧಿಕೃತ ಟೆಲಿಕಾಂ ಟವರ್ಗಳನ್ನು(Telecom Tower) ಅಳವಡಿಸಿದ್ದ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಎಲ್ಲಾ ರಸ್ತೆಗಳಲ್ಲಿನ ಮರಗಳ ಕೊಂಬೆಗಳಲ್ಲಿ ಗೊಂಚಲು ಗೊಂಚಲಾಗಿ OFC Cableಗಳನ್ನು ತೂಗು ಹಾಕಿದ್ದ ಬಯೋ ಡಿಜಿಟಲ್ ಫೈಬರ್ ಪ್ರೈ.ಲಿಮಿಟೆಡ್, ಭಾರತಿ ಏರ್ಟೆಲ್ ಲಿಮಿಟೆಡ್, ಟೆಲೆಸೋನಿಕ್ ನೆಟ್ವರ್ಕ್ಸ್ ಲಿಮಿಟೆಡ್, ವಿಎಸಿ ಟೆಲ್ಇನ್ಫ್ರಾ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಎಂಬ ಟೆಲಿಕಅಂ ಸರ್ವಿಸ್ ಪ್ರೊವೈಡರ್ಸ್ ಸಂಸ್ಥೆಗಳ ವಿರುದ್ಧ ಸ್ಥಳೀಯ ಪೋಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಅಲ್ಲದೇ ಪ್ರತಿಯೊಂದು ಸಂಸ್ಥೆಗೂ ತಲಾ ₹ 20 ಕೋಟಿ ರೂಪಾಯಿಗಳ (ಒಟ್ಟು ₹ 80 ಕೋಟಿ ರೂ.ಗಳು) ದಂಡವನ್ನು ವಿಧಿಸಲಾಗಿದೆ.
ದಿನಾಂಕ 24/08/2022 ರಂದು ಈ ಸಂಬಂಧ ಪಾಲಿಕೆಯ ಮುಖ್ಯ ಆಯುಕ್ತರಿಗೆ, ದಕ್ಷಿಣ ವಲಯ ಆಯುಕ್ತರಿಗೆ, ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ಮತ್ತು ಪಾಲಿಕೆಯ OFC ವಿಭಾಗದ ಮುಖ್ಯ ಆಯುಕ್ತರಿಗೆ ದಾಖಲೆಗಳ ಸಹಿತ ದೂರುಗಳನ್ನು N R ರಮೇಶ್ ನೀಡಿದ್ದರು. ಈಗ ಬಿಬಿಎಂಪಿ ಎಚ್ಚೆತ್ತುಕೊಂಡು ರಸ್ತೆಗಳ ಮೇಲೆ ಅಳವಡಿಸಿದ್ದ ಮೊಬೈಲ್ ನೆಟ್ವರ್ಕ್ ಕಂಪನಿಗಳ ಕಂಬಗಳನ್ನು ತೆರವು ಮಾಡಲಾಗಿದೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
10/09/2022 07:40 pm