ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಹಿಜಾಬ್ ಕಾವು ಹೆಚ್ಚಾಗುತ್ತಲೆ ಇದೆ. ದೊಡ್ಡಬಳ್ಳಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ವಿದ್ಯಾರ್ಥಿನಿಯರು ಸಹ ಹಿಜಾಬ್ ತೆಗೆಯಲು ಒಪ್ಪದೆ ಮನೆಗೆ ವಾಪಸ್ ಬಂದಿದ್ದಾರೆ.
ದೊಡ್ಡಬಳ್ಳಾಪುರ ನಗರ ಹೊರವಲಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರಿಂದ ಹಿಜಾಬ್ ತೆಗೆದು ತರಗತಿಗಳಿಗೆ ಬರುವಂತೆ ಉಪನ್ಯಾಸಕರು ಮನವಿ ಮಾಡಿದ್ದಾರೆ.
ಆದರೆ ಹಿಜಾಬ್ ತೆಗೆಯಲು ನಿರಕಾರಿಸಿದ 15 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ವಿದ್ಯಾರ್ಥಿನಿಯರು, ಹಿಜಾಬ್ ಅನ್ನು ನಾವು ಹಿಂದಿನಿಂದಲೂ ಧರಿಸುತ್ತಾ ಬಂದಿದ್ದೇವೆ. ಈಗ ಏಕಾಏಕಿ ಬಂದು ಹಿಜಾಬ್ ಧರಿಸದಂತೆ ಹೇಳುತ್ತಿದ್ದಾರೆ. ತರಗತಿಯಿಂದ ಹೊರಗೆ ಕೂತು ಪಾಠ ಕೇಳುವುದಕ್ಕೂ ಅವಕಾಶ ನೀಡುತ್ತಿಲ್ಲ. ಮುಂದಿನ ವಾರದಿಂದ ಪ್ರಾಕ್ಟಿಕಲ್ ಎಕ್ಸಾಂ ಇದೆ. ಪರೀಕ್ಷೆ ಬರೆಯಲು ಹಾಜರಾತಿ ಇಲ್ಲದಿದ್ದಲ್ಲಿ ಕಾಲೇಜ್ ನವರೇ ಹೊಣೆ, ನಮಗೆ ಹಿಜಾಬ್ ಬೇಕೆ ಬೇಕು ಎಂದರು.
Kshetra Samachara
17/02/2022 06:36 pm