ಬೆಂಗಳೂರು : ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಗಿರಿಪುರಂ ಕೊಳಚೆ ಪ್ರದೇಶದವರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದಾರೆ.ಸುಮಾರ 60 ವರ್ಷದ ಬೇಡಿಕೆಗೆ ಇಂದು ಈಡೇರಿದಂತಾಗಿದೆ.
ಒಟ್ಟು 37 ಗುಂಟೆ ಜಾಗವನ್ನು ಗಿರಿಪುರಂ ಕೊಳಚೆ ಪ್ರದೇಶದಲ್ಲಿ ವಾಸಮಾಡುವ 189 ಮನೆಗಳಿಗೆ ಹಕ್ಕಪತ್ರ ವಿತರಣೆ ಮಾಡಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಶಾಸಕ ಜಮೀರ್ ಸಹಯೋಗದೊಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ.ಹಕ್ಕು ಪತ್ರ ಪಡೆದ ಗಿರಿಪುರಂ ಕೊಳಚೆ ಪ್ರದೇಶದ ಜನರು ಫುಲ್ ಖುಷಿಯಾಗಿದ್ದಾರೆ. ಶಾಸಕ ಜಮೀರ್ ಅಹಮ್ಮದ್ ರವರಿಗೆ ಅಭಿನಂದನೆಯ ಸುರಿಮಳೆ ಗೈದಿದ್ದಾರೆ.
PublicNext
07/10/2022 05:06 pm