ಬೆಂಗಳೂರು: ಕಾಲೇಜ್ ಗೋಡೆ ಕುಸಿದು ಕಾರು, ಬೈಕ್ ಜಖಂ ಆದ ಘಟನೆ ನಡೆದಿದೆ. ಪರಿಣಾಮ ಎರಡು ಬೈಕ್ ಹಾಗೂ ಒಂದು ಕಾರು ಜಖಂ ಆಗಿದ್ದು ಗೋಡೆ ಬೀಳುವುದನ್ನ ಗಮನಿಸಿ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಸುಧಾಮ್ ನಗರದ ಟಿಕೆಸಿ ಗಾರ್ಡನ್‌ನಲ್ಲಿ ಶನಿವಾರ ಸಂಜೆ 5 ಗಂಟೆಗೆ ಗೋಡೆ ಕುಸಿದು ಬಿದ್ದಿದೆ.
ಸರ್ಕಾರಿ ಫಾರ್ಮಿಸಿ ಕಾಲೇಜ್ ಗೋಡೆ ಅಂತ ತಿಳಿದು ಬಂದಿದೆ. ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಕಾಲೇಜ್ ಗೋಡೆ ಕುಸಿಯುವ ಬಗ್ಗೆ ಮೊದಲೇ ಎಚ್ಚರಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಬಿಬಿಎಂಪಿಗೆ ಮಾಹಿತಿ ನೀಡಿದ್ದರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
PublicNext
09/12/2024 10:39 am