ಬೆಂಗಳೂರು: ನೀರಿನ ಬಿಲ್ ಬಾಕಿ ಉಳಿಸಿದವರ ಮೇಲೆ ಚಾಟಿ ಬೀಸಲು ಜಲಮಂಡಳಿ ಮುಂದಾಗಿದೆ. ಬಾಕಿ ಬಿಲ್ ಪಾವತಿಸುವಂತೆ ಆರ್ಥಿಕ ಇಲಾಖೆಗೆ ಜಲಮಂಡಳಿಯಿಂದ ಪತ್ರ ಬರೆದಿದ್ದು ಜಲಮಂಡಳಿಯ ಪತ್ರಕ್ಕೆ ಉತ್ತರ ನೀಡುವಂತೆ ಸೂಚನೆ ಕೊಡಲಾಗಿದೆ.
ಯಾವುದೇ ಪ್ರತಿಕ್ರಿಯೆ ಬರದಿದ್ರೆ ಅಂತವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ಕೊಟ್ಟಿದೆ. ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಇಲಾಖೆಗಳ ಪಟ್ಟಿ ಸಿದ್ದಪಡಿಸಿದ BWSSB, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಂಗ ಸಂಸ್ಥೆಗಳಿಂದ ಬಾಕಿ ಇರುವ ₹170 ಕೋಟಿ ನೀರಿನ ಬಿಲ್ ಪಾವತಿಸುವಂತೆ ಪತ್ರ ಬರೆದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಗೆ ಪತ್ರ ಬರೆದು BWSSB ಮಾಹಿತಿ ಕೊಟ್ಟಿದೆ. ಹೊರೆಯಾದ ಸರ್ಕಾರಿ ಸಂಸ್ಥೆಗಳು ಯಾವುವು ಅಂತ ನೋಡೋದಾದ್ರೆ...
ಶಿಕ್ಷಣ ಇಲಾಖೆ : ₹38 ಲಕ್ಷ
ತೋಟಗಾರಿಕೆ ಇಲಾಖೆ: ₹47 ಲಕ್ಷ
ಬಿಬಿಎಂಪಿ: ₹23 ಕೋಟಿ
*ಕೇಂದ್ರ ಸರ್ಕಾರ: ₹ 26 ಕೋಟಿ
PublicNext
09/12/2024 11:14 am