ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಲಕ್ಷಾಂತರ ವೆಚ್ಚದ ವ್ಯಾಪಾರ ಮಳಿಗೆ ಉಪಯೋಗ ಶೂನ್ಯ; ಅನೈತಿಕ ಚಟುವಟಿಕೆ ತಾಣ

ನೆಲಮಂಗಲ: ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗೋ ನಿಟ್ಟಿನಲ್ಲಿ ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ನಗರದಲ್ಲಿ ನಿರ್ಮಿಸಿದ ಹೂಹಣ್ಣು- ತರಕಾರಿ ಮಾರುಕಟ್ಟೆ ಸೂಕ್ತ ನಿರ್ವಹಣೆ ಇಲ್ಲದೆ ಇದೀಗ ಪೋಲಿಗಳ ಅನೈತಿಕ ತಾಣವಾಗಿದೆ. ಇತ್ತ ಸಾಕಷ್ಟು ವರ್ಷಗಳಿಂದ ಹರಾಜು ಪ್ರಕ್ರಿಯೆ ಕೂಡ ನಡೆಯದೆ ಸ್ಥಳೀಯ ವ್ಯಾಪಾರಿಗಳಿಗೆಂದು ನಿರ್ಮಿಸಿದ ಮಳಿಗೆಗಳು ಅವ್ಯವಸ್ಥೆ ಗೂಡಾಗಿದೆ.

2007-08ನೇ ಸಾಲಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗೋ ಉದ್ದೇಶದಿಂದ ಬೆಂ.ಗ್ರಾ. ಜಿಲ್ಲೆ ನೆಲಮಂಗಲ ತಾಪಂ ವತಿಯಿಂದ 35 ಲಕ್ಷ ವೆಚ್ಚದಲ್ಲಿ ಈ ಮಾರುಕಟ್ಟೆ ನಿರ್ಮಿಸಲಾಗಿತ್ತು. ಅಲ್ಲದೆ, ನಗರಸಭೆಯಾಗಿ ಮೇಲ್ದರ್ಜೆಗೇರುವುದಕ್ಕೂ ಮುಂಚೆ ಆಗಿನ ನೆಲಮಂಗಲ ಪುರಸಭೆ ಕೂಡ ಹಣ್ಣು- ತರಕಾರಿ ಮಳಿಗೆ ನಿರ್ಮಿಸಿತ್ತು. ಆದರೆ, ಆಗಿನ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಹರಾಜು ಪ್ರಕ್ರಿಯೆ ನಡೆಸದೆ ಮತ್ತು ನಿರ್ವಹಣೆ ಇಲ್ಲದೆ ಯಾವ ವ್ಯಾಪಾರಿಗೂ ಉಪಯೋಗಕ್ಕೆ ಬಾರದಂತೆ ಮಳಿಗೆಗಳು ಪಾಳು ಬಿದ್ದಿದೆ!

ಒಟ್ಟು 47 ಮಳಿಗೆಗಳಲ್ಲಿ ಮೂಲ ಸೌಕರ್ಯ ಒದಗಿಸದೆ ಬೇಕಾಬಿಟ್ಟಿ ನಿರ್ಮಿಸಲಾಗಿದೆ. ಸಂಜೆಯಾಗುತ್ತಲೇ ಪುಂಡರು ಮದ್ಯಸೇವನೆ, ಜೂಜಾಟ ಮುಂತಾದ ಅನೈತಿಕ ಚಟುವಟಿಕೆಗಳಿಗೆ ಬಳಸುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ವ್ಯಾಪಾರಕ್ಕೆಂದು ಬರುವ ಹಳ್ಳಿಗರಿಗೆ, ಮಹಿಳೆಯರಿಗೆ ಶೌಚಾಲಯ ಕೊರತೆ ಕೂಡ ಇದೆ. ಕೆಲವರು ಮಳಿಗೆಯನ್ನು ಕಸ ಹಾಕುವ ಘಟಕ ಮಾಡಿದ್ದಾರೆ.

ಬಹುತೇಕ ವ್ಯಾಪಾರಿಗಳು ರಸ್ತೆಬದಿ ಹೂ ಹಣ್ಣು, ತರಕಾರಿ ಮಾರುತ್ತಿದ್ದು, ಇದ್ರಿಂದ ಟ್ರಾಫಿಕ್ ಸಮಸ್ಯೆ, ತ್ಯಾಜ್ಯ ವಿಲೇವಾರಿ, ಕಸ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಉಪಯೋಗಕ್ಕೆ ಬಾರದ ಈ ಮಳಿಗೆಗಳ ನಿರ್ಮಾಣದಿಂದ ಜನರ ತೆರಿಗೆ ಹಣ ಪೋಲಾಗಿದೆ. ಈಗಿನ ನಗರಸಭೆ ಎಚ್ಚೆತ್ತು, ಈ ಸಮಸ್ಯೆ ಬಗೆಹರಿಸಬೇಕಿದೆ.

ಸುಮಿತ್ರ, ಪಬ್ಲಿಕ್ ನೆಕ್ಸ್ಟ್ ನೆಲಮಂಗಲ

Edited By : Manjunath H D
Kshetra Samachara

Kshetra Samachara

21/08/2022 05:52 pm

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ