ಬೆಂಗಳೂರು : ನೇರಳೆ ಮಾರ್ಗದ ಕೆಂಗೇರಿ- ಮೈಸೂರು ರಸ್ತೆಯ ನಡುವಿನ ಮೆಟ್ರೋ ಸೇವೆ ಆರಂಭವಾಗಿ ವರ್ಷದ ಸನಿಹಕ್ಕೆ ಬಂದಿದರೂ ಜನದಟ್ಟಣೆ ಇಲ್ಲದ ಸಮಯದಲ್ಲಿ ಕೆಂಗೇರಿವರೆಗೆ ಪರ್ಯಾಯ ರೈಲುಗಳನ್ನು ಮಾತ್ರ ಓಡಿಸಲಾಗುತ್ತಿದೆ.
2018ರ ಡಿಸೆಂಬರ್ ನಲ್ಲಿ ಪೂರ್ಣ ಗೊಳ್ಳಬೇಕಿದ್ದ ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾರಂಭ ಮಾಡಿದ್ದು, 2021 ರ ಅಗಷ್ಟ್ ನಲ್ಲಿ ಈ ಮಾರ್ಗದಲ್ಲಿ ಜನದಟ್ಟಣೆ ಅವಧಿಯಲ್ಲಿ ಬೆಳಗ್ಗೆ 8 ರಿಂದ 11 ಹಾಗೂ 4.30 ರಿಂದ 7.30 ರವರೆಗೆ ಮಾತ್ರ ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ ರೈಲು ಸಂಚಾರ ನಡೆಸಲಾಗುತ್ತಿದೆ.
ಉಳಿದ ಅವಧಿಯಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ನಡುವೆ ಮಾತ್ರ ಮೆಟ್ರೋ ಸೇವೆ ಲಭ್ಯವಿದೆ. ಇದರಿಂದ ಬೈಯಪ್ಪನ ಹಳ್ಳಿಯಿಂದ ಬರುವ ಪ್ರಯಾಣಿಕರು ಮೈಸೂರು ರಸ್ತೆ ನಿಲ್ದಾಣದಲ್ಲಿ ಇಳಿದು ಮತ್ತೊಂದು ರೈಲಿಗಾಗಿ ಕಾಯಬೇಕಾಗಿರುವುದರಿಂದ ಪ್ರಯಾಣಿಕರಿಗೆ ಅನಾನೂಕೂಲ ವಾಗುತ್ತಿದೆ.
ಬಿಎಂಆರ್ ಸಿ ಎಲ್ ಅಧಿಕಾರಿಗಳ ಪ್ರಕಾರ ಸರಾಸರಿ ದೈನಂದಿನ ಪ್ರಯಾಣಿಕರು 25 ಸಾವಿರ ಅಷ್ಟೇ ಹೀಗಾಗಿ ಕೆಂಗೇರಿವರೆಗೆ ರೈಲು ಓಡಿಸಲು ಸಾಧ್ಯವಿಲ್ಲ ಎಂಬುದು ವಾದವಾಗಿದೆ.
Kshetra Samachara
22/07/2022 10:02 am