ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜಕೀಯದಲ್ಲಿ ಕುರ್ಚಿಗಾಗಿ ಕಿತ್ತಾಟ ಕೇಳಿದ್ದೇವೆ, ಸರ್ಕಾರಿ ಅಧಿಕಾರಕ್ಕಾಗಿ ಕಿತ್ತಾಟ ನೋಡಿದ್ದೇವೆ. ಇನ್ನಿತರ ಸಂಘಟನೆಗಳ ಅಧಿಕಾರದ ಕುರ್ಚಿಗಾಗಿ ಕಿತ್ತಾಟ ನೋಡಿದ್ದೇವೆ. ಇದೆಲ್ಲದರ ನಡುವೆ ಇದೀಗ ರಾಜ್ಯದಲ್ಲಿರುವ ಹೋಟೆಲ್ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷರ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದೆ.
ಹೌದು. ಕೆಲ ದಿನಗಳಿಂದ ಹಾಟ್ ಟಾಪಿಕ್‌ನಲ್ಲಿದ್ದ ಹೋಟೆಲ್‌ಗಳು ಇದೀಗ ಹೋಟೆಲ್ ಮಾಲೀಕರ ಅಧ್ಯಕ್ಷರ ಸ್ಥಾನದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಯಾವುದೇ ಚುನಾವಣೆ ಇಲ್ಲದೇ ಸ್ವಯಂ ಘೋಷಿತವಾಗಿ ಅಧ್ಯಕ್ಷರ ಆಯ್ಕೆಯಾಗಿದೆ ಅಂತ ಸಂಘದ ಇತರೆ ಸದಸ್ಯರು ಈಗ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಯಾವುದೇ ಚುನಾವಣೆ ಇಲ್ಲದೇ ಸ್ವಯಂ ಘೋಷಿತವಾಗಿ ಜಿ.ಕೆ ಶೆಟ್ಟಿ ಎಂಬುವರು ಕರ್ನಾಟಕ ರಾಜ್ಯ ಹೋಟೆಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಎಂದು ಘೋಷಣೆ ಮಾಡಿಕೊಡಿದ್ದಾರೆ. ಇದನ್ನ ಖಂಡಿಸಿ ಹಾಲಿ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ.
ಜಿ.ಕೆ ಶೆಟ್ಟಿಯವರ ಆಯ್ಕೆ ಊರ್ಜಿತವಲ್ಲ ಪ್ರತೀ ಮೂರು ವರ್ಷಕ್ಕೊಮ್ಮೆ ಚುನಾವಣೆ ಮಾಡುತ್ತಾರೆ. ಅದೇ ರೀತಿಯಲ್ಲಿ ಕಳೆದ ವರ್ಷ 2021 ಸಾಲಿನ ಚುಣಾವಣೆ ಮಾಡಬೇಕಿತ್ತು . ಆದ್ರೆ ಕೊರೊನಾ ಕಾರಣಾಂತರಗಳಿಂದ ಚುನಾವಣೆ ನಡೆದಿರಲಿಲ್ಲ. ಹೀಗಾಗಿ ಸದ್ಯ ಚುನಾವಣಾ ನೋಂದಣಾಧಿಕಾರಿಯಾದ ಶಶಿಧರ್ ತಡೆಯಾಜ್ಞೆ ಮಾಡಿದ್ದಾರೆ. ಹೀಗಿದ್ದರೂ ಯಾರ ಗಮನಕ್ಕೂ ತಾರದೇ ಏಕಾಏಕಿ ಚುನಾವಣೆ ನಡೆಸಿ ಅಧ್ಯಕ್ಷ ಎಂದು ಏಕಪಕ್ಷೀಯವಾಗಿ ಅಧ್ಯಕ್ಷ ಎಂದು ಘೋಷಣೆ ಮಾಡಿಕೊಂಡಿದ್ದಾರೆಂದು ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ.
PublicNext
27/04/2022 12:04 pm