ಬೆಂಗಳೂರು : ಹುತಾತ್ಮ ವೀರ ಯೋಧ ಸಂದೀಪ್ ಉನ್ನೀಕೃಷ್ಣನ್ ಅವರ ಸ್ಮಾರಕವನ್ನು ತಮ್ಮ ಸ್ವಂತ ಹಣದಲ್ಲೇ ಕಟ್ಟಿಸುವ ಮೂಲಕ ಶಾಸಕ ವಿಶ್ಬನಾಥಗೆ ಆರ್ಮಿ ಫೋರಂನ ಶಶಾಂಕ್ ನೀತಿ ಪಾಠ ಮಾಡಿದ್ದಾರೆ.
ಸುಮಾರು 20 ಸಾವಿರಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಪಾಳು ಬಿದ್ದದ್ದ ಸ್ಮಾರಕವನ್ನು ಸರಿ ಮಾಡಿಸಿದ್ದಾರೆ. ಕಳೆದ 2018ರಲ್ಲಿ ಯಲಹಂಕ ಡೈರಿ ಸರ್ಕಲ್ ರೋಡಿನಲ್ಲಿರುವ ಈ ಸ್ಮಾರಕಕ್ಕೆ ಲಾರಿಯೊಂದು ಗುದ್ದಿ ಹಾಳಾಗಿತ್ತು.
ಈ ಸಂಬಂಧ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ಮಾರ್ಗದಲ್ಲಿ ಸಂದೀಪ್ ಉನ್ನೀಕೃಷ್ಣನ್ ನಿವಾಸ ಕೂಡ ಇದೆ. ಆದರೂ ಸ್ಥಳೀಯ ಶಾಸಕರಾಗಲಿ ಅಥವಾ ಪಾಲಿಕೆಯಾಗಲಿ ಇದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ.
ಇನ್ನು ಸಂದೀಪ್ ಉನ್ನೀಕೃಷ್ಣನ್ ಸ್ಮಾರಕದ ಕೂಗಳತೆ ದೂರದಲ್ಲಿ ಬೃಹತ್ ಕಾರ್ ಗಳ ಅಲಂಕಾರಿಕ ಜಂಕ್ಷನ್ ಒಂದನ್ನು ಶಾಸಕ ವಿಶ್ಬನಾಥ್ ಲಕ್ಷಾಂತರ ಹಣ ಸುರಿದು ಮಾಡಿಸಿದ್ದಾರೆ. ಅವರಿಗೆ ಈ ಸ್ಮಾರಕ ಕಾಣೋದಿಲ್ಲವೇ ಎಂಬ ಪ್ರಶ್ನೆಯನ್ನು ಆರ್ಮಿ ಫೋರಂ ಕೇಳುತ್ತಿದೆ.
Kshetra Samachara
09/02/2022 02:36 pm