ಬೆಂಗಳೂರು:ರಾ.ಹೆದ್ದಾರಿ 48ರ ತುಮಕೂರು ರಸ್ತೆಯ 8ನೇ ಮೈಲಿ, ಗೊರಗುಂಟೆಪಾಳ್ಯ ನಡುವಿನ ಪೀಣ್ಯ ಮೇಲ್ಸೇತುವೆ ಪಿಲ್ಲರ್ ನಡುವೆ ಕಂಡಿದ್ದ ಸೆಗ್ಮೆಂಟ್ ಜಾಯಿಂಟ್ ತಾಂತ್ರಿಕ ಸಮಸ್ಯೆಯನ್ನ ಸದ್ಯ NHAI ಬಗೆ ಹರಿಸಿದ್ದಂತಿದೆ.
ಇನ್ನೂ ಕಳೆದೊಂದುವರೆ ತಿಂಗಳಿಂದ ಮೇಲ್ಸೇತುವೆ 101,102 ಪಿಲ್ಲರ್ ನಡುವಿನ ತಾಂತ್ರಿಕ ಸಮಸ್ಯೆ ಯಿಂದ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದ್ರಿಂದ 8 ನೇ ಮೈಲಿ ಸರ್ವೀಸ್ ರಸ್ತೆಯಲ್ಲಿ ದಟ್ಟಣೆಯಿಂದ ಕಂಗೆಟ್ಟ ವಾಹನ ಸವಾರರಿಗೆ, ಜನ್ರಿಗೆ ಟ್ರಾಫಿಕ್ ಬಿಸಿ ತಪ್ಪಿ ರಿಲೀಫ್ ಸಿಗುವ ಮುನ್ಸೂಚನೆ ಸಿಕ್ಕಿದೆ.
ಹೌದು ಈಗಾಗಲೇ ತಾಂತ್ರಿಕ ದೋಷ ವೀಕ್ಷಿಸಿ ಸರಿಪಡಿಸಿರೋ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಇಂದು ಸಂಜೆ ಯಿಂದ ತಾಂತ್ರಿಕ ಸಮಸ್ಯೆ ಹೊಂದ 101,102 ಪಿಲ್ಲರ್ ಮೆಲ್ಸೇತುವೆ ಮೇಲೆ ಸುಮಾರು 30 ಟನ್ ತೂಕದ ಕಲ್ಲು, ಮಣ್ಣು ಲೋಡ್ ತುಂಬಿದ 6 ಟಿಪ್ಪರ್ ಲಾರಿಗಳ ಮೂಲಕ ನಿರಂತರ ಟ್ರಯಲ್ ರೈಡ್ ನಡೆಸುತ್ತಿವೆ.
ಈ ಒಂದು ಟ್ರಯಲ್ ರೈಡ್ ಪರಿಶೀಲನೆ ಮೂರು ದಿನಗಳ ಕಾಲದವರೆಗೆ NHAI ನಿಂದ ಪರಿಶೀಲನೆ ನೆಡೆಯಲ್ಲಿದ್ದು, ಮೂರು ದಿನಗಳ ನಂತ್ರ, ಡೆಲ್ಲಿ NHAI ಇಂಜಿನಿಯರ್ ಗಳ ಪರಿಶೀಲನೆ ಮತ್ತು ಒಪ್ಪಿಗೆ ಬಳಿಕ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿವುದು. ಅಲ್ಲಿಯ ವರೆಗೂ ಎಂದಿನಂತೆಯೆ ಮೇಲ್ಸೇತುವೆ ಬಂದ್ ಇರಲಿದ್ದು, ಸರ್ವೀಸ್ ರಸ್ತೆಯಲ್ಲೇ ವಾಹನ ಸಂಚಾರ ಮಾಡಬೇಕಾಗಿದೆ.
PublicNext
07/02/2022 07:51 am