ಬೆಂಗಳೂರು: ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ದಿಂದ ನಾಗಸಂದ್ರ ಮೆಟ್ರೋ ನಿಲ್ದಾಣದವರೆಗೆ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಪಿಲ್ಲರ್ ದುರಸ್ತಿ ಕಾರ್ಯ ವಿಳಂಬವಾಗುತ್ತಿದೆ ಎಂದು ಎನ್.ಎಚ್.ಎ.ಐಗೆ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ 8ನೇ ಮೈಲಿ ಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಛೇರಿಗೆ ತೆರಳಿ ಸಂಬಂಧ ಪಟ್ಟವರಿಗೆ ಮನವಿ ಪತ್ರ ನೀಡಿದರು ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷ ಬಿ.ಎಂ.ಚಿಕ್ಕಣ್ಣ ಪಿಲ್ಲರ್ 101-102 ನಡುವೆ ಕಬ್ಬಿಣದ ವೈರುಗಳು ಬಿರುಕು ಬಿಟ್ಟಿದ್ದವು ಅಪಾಯದ ಮುನ್ಸೂಚನೆ ಕಂಡ ಅಧಿಕಾರಿಗಳು ವಾಹನ ಸಂಚಾರವನ್ನು ನಿಲ್ಲಿಸಿ ದುರಸ್ತಿ ಕಾರ್ಯ ಕೈಗೊಂಡು 25 ದಿನಗಳು ಕಳೆಯುತ್ತಿದ್ದರು ಕೆಲಸ ಮುಗಿಯದಿರುವುದು ವಾಹನ ಸವಾರರಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.
ಪ್ರತಿನಿತ್ಯ ಲಕ್ಷಾಂತರ ವಾಹನಗಳು ಫ್ಲೈಓವರ್ ಕೆಳಗೆ ಸಂಚರಿಸುವುದರಿಂದ ಗೊರಗುಂಟೆಪಾಳ್ಯ ದಿಂದ ನಾಗಸಂದ್ರ ಮೆಟ್ರೋ ವರೆಗೆ ತೆರಳಲು 3 ಗಂಟೆಗೂ ಅಧಿಕ ಸಮಯವನ್ನು ತೆಗೆದು ಕೊಳ್ಳುತ್ತಿದ್ದು, ದಿನನಿತ್ಯ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇನ್ನೂ ಮನವಿ ಪತ್ರ ಪಡೆದ ಅಧಿಕಾರಿಗಳು 10 ದಿನಗಳಲ್ಲಿ ದುರಸ್ತಿ ಕಾರ್ಯ ಮುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಹೇಳಿದ ಸಮಯಕ್ಕೆ ಮುಗಿದಿಲ್ಲ ವೆಂದರೆ ನಮ್ಮ ಸಂಘಟನೆ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರತಿಭಟನೆ ಮಾಡಲು ಮುಂದಾಗುತ್ತೇವೆ ಎಂದು ಚಿಕ್ಕಣ್ಣ ಎಚ್ಚರಿಸಿದರು.
ಅಲ್ಲದೆ ಕಾಮಗಾರಿ ಕಾರ್ಯ ಪಡೆದ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಮುಂದಾಗುವಂತೆ ಮತ್ತು ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುತ್ತದೆ ಎಂದು ತಿಳಿಸಿದರು.
Kshetra Samachara
20/01/2022 10:36 am