ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ಚಿಗರೇನಹಳ್ಳಿಗೆ ಮತ್ತೆ ತ್ಯಾಜ್ಯ ಹೊತ್ತ ಲಾರಿ ದಾಳಿ; ಸ್ಥಳೀಯರಿಂದ ಆಕ್ರೋಶ, ಎಚ್ಚರಿಕೆ

ದೊಡ್ಡಬಳ್ಳಾಪುರ: ವೈಜ್ಞಾನಿಕವಾಗಿ‌ ಕಸ ವಿಲೇವಾರಿ ಮಾಡಿದರೆ ಯಾವ ಸಮಸ್ಯೆಯೂ ಇಲ್ಲ. ಆದರೆ, ಚಿಗರೇನಹಳ್ಳಿ MSGP ಘಟಕದಲ್ಲಿ ಅವೈಜ್ಞಾನಿಕ‌ ಕಸ ವಿಲೇವಾರಿಯಿಮದ ಹತ್ತಾರು ಸಮಸ್ಯೆ ತಲೆದೋರಿದ್ದವು. ಅಂತರ್ಜಲ ಕಲುಷಿತ, ದುರ್ನಾತ, ಚರ್ಮದ ಕಾಯಿಲೆ, ಕೈಕಾಲು ನೋವು, ನೊಣ- ನಾಯಿಗಳ ಹಾವಳಿ ಹೀಗೆ ಸಮಸ್ಯೆಗಳ ಸರಮಾಲೆ ನಿವಾರಣೆಗಾಗಿ MSGP ಘಟಕ ಮುಚ್ಚಲು ಕೆಲವು ದಿನಗಳ ಕಾಲ ಸ್ಥಳೀಯರು ಧರಣಿ ನಡೆಸಿದ್ದರು.

ಆದರೆ, ಕಸದ ಮಾಫಿಯಾದಿಂದಾಗಿ ಅಧಿಕಾರಿಗಳು, ಪೊಲೀಸರು ಈ ಧರಣಿ ನಿಲ್ಲಿಸಿದ್ದರು. ಸ್ಥಳೀಯ ಶಾಸಕ‌ ವೆಂಕಟರಮಣಪ್ಪ ಜಿಲ್ಲಾ ಉಸ್ತುವಾರಿ ಸಚಿವ MTB ನಾಗರಾಜ್ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿ, ಧರಣಿ ವಾಪಸ್ ಪಡೆಯಲು‌ ಮನವಿ ಮಾಡಿದ್ದರು.

ಅಧಿಕಾರಿಗಳು, ಜನ‌ಪ್ರತಿನಿಧಿಗಳ ಪ್ರಯತ್ನದಿಂದ ಕಸದ ವಾಹನ‌ ಚಿಗರೇನಹಳ್ಳಿಗೆ ಬರುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದವು. ಇದೀಗ ಮತ್ತೆ ಕಸ ತುಂಬಿದ ಲಾರಿಗಳು ಚಿಗರೇನಹಳ್ಳಿಗೆ ಬರುವುದನ್ನು ಸ್ಥಳೀಯರು ವಿರೋಧಿಸಿ, ಕಸ ತುಂಬಿದ ಲಾರಿ ಇತ್ತ ಬರಬಾರದೆಂದು ಮತ್ತೆ ತಾಕೀತು ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

17/12/2021 04:00 pm

Cinque Terre

978

Cinque Terre

0

ಸಂಬಂಧಿತ ಸುದ್ದಿ