ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳೆ ಅವಾಂತರಕ್ಕೆ ಮುಳುಗಿಹೋದ ರೈನ್ಬೋ ಲೇಔಟ್

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಅದೆಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ ಅಂದರೆ ನಗರದ ಸರ್ಜಾಪುರ ರಸ್ತೆಯಲ್ಲಿರುವ ರೈನ್ಬೋ ಲೇಔಟ್ ಸಂಪೂರ್ಣವಾಗಿ ನೀರಿನಿಂದ ಜಲಾವೃತಗೊಂಡಿದೆ. ಲೇಔಟ್‌ನಲ್ಲಿ ಒಟ್ಟು 450 ಮನೆಗಳಿದ್ದು ಎಲ್ಲಾ ಮನೆಗಳು ಕೂಡ ನೀರಿನಿಂದ ಜಲಾವೃತಗೊಂಡು ಮನೆಯಿಂದ ಹೊರಬರಲು ಕೂಡ ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ರೈನ್ಬೋ ಲೇಔಟ್‌ನಿಂದ ಹೊರಬರಲು ನಿವಾಸಿಗಳು ಟ್ರ್ಯಾಕ್ಟರ್ ಏರಿ ಹೊರಬರುತ್ತಿರುವ ದೃಶ್ಯಗಳು ಕಂಡುಬಂತು ಲೇಔಟ್ ಸಂಪೂರ್ಣವಾಗಿ ನೀರಿನಿಂದ ತುಂಬಲು ಕಾರಣವಾಗಿದ್ದು ಹಲನಾಯಕನಹಳ್ಳಿ ಲೇಕ್ ತುಂಬಿ ಹರಿಯುತ್ತಿದ್ದು ಇದರಿಂದಲೇ ಓಟರ್ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಸದ್ಯಕ್ಕೆ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಮೋಟಾರ್ ಅಳವಡಿಸಿ ಲೇಔಟ್ ನಲ್ಲಿ ತುಂಬಿರುವ ನೀರನ್ನು ಹೊರ ಹಾಕುವ ದೃಶ್ಯಗಳು ಕಂಡು ಬರುತ್ತದೆ. ಇತ್ತ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳು ಲೇಔಟ್ ಜನರ ಕಷ್ಟ ಕೇಳಲು ಯಾರೊಬ್ಬರೂ ಬಂದಿಲ್ಲ ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಜ್ಜಾಪುರ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By : Somashekar
PublicNext

PublicNext

04/08/2022 08:31 pm

Cinque Terre

27.07 K

Cinque Terre

0

ಸಂಬಂಧಿತ ಸುದ್ದಿ