ಯಲಹಂಕ: ಕೊರೊನಾದಿಂದಾಗಿ ಮೃತಪಟ್ಟವರ 75 ಕುಟುಂಬಗಳಿಗೆ ಬಿಬಿಎಂಪಿ ಯಲಹಂಕ ವಲಯದ ವತಿಯಿಂದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ತಲಾ 1 ಲಕ್ಷ ಪರಿಹಾರ ಧನವನ್ನು ಇಂದು ಯಲಹಂಕದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ವಿತರಿಸಲಾಯಿತು.
ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಯಲಹಂಕ ಬಿಬಿಎಂಪಿ ಜಂಟಿ ಆಯುಕ್ತೆ ಪೂರ್ಣಿಮಾ ಅವರು ಪರಿಹಾರ ಮೊತ್ತವನ್ನು ವಿತರಿಸಿದರು. ಈ ಸಂದರ್ಭ ಶಾಸಕರು ಮಾತನಾಡಿ, ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸಿದ ಸಾರ್ಥಕ ಸೇವೆ ಇದಾಗಿದೆ. ನೆರವಿನ ಹಣ ದುರುಪಯೋಗವಾಗದಂತೆ ಸದುಪಯೋಗ ಮಾಡಿಕೊಂಡಾಗ ಮಾತ್ರ ಸರ್ಕಾರದ ಆಸೆ ನೆರವೇರುತ್ತದೆ. ಹಣ ಕ್ಷಣಿಕ ಸಮಾಧಾನ ನೀಡುತ್ತದೆ ಮಾತ್ರ. ಆದರೆ, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಆ ನೋವು-ದುಃಖ ಯಾವ ಹಣದಿಂದಲೂ ತುಂಬಲು ಸಾಧ್ಯವಿಲ್ಲ ಎಂದರು.
Kshetra Samachara
25/12/2021 09:55 pm