ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿ ಏರೋಟೆಕ್ ಪಾರ್ಕ್ ನಲ್ಲಿ ಜು. 14ರಂದು IFFCO ನ್ಯಾನೋ ಸ್ಥಾವರಕ್ಕೆ ಸಿಎಂ ಅಡಿಗಲ್ಲು

ನಾಳೆ (ಜುಲೈ 14 )ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ನಾಗನಾಯಕನ ಹಳ್ಳಿಯ ಏರೋಟೆಕ್ ಪಾರ್ಕ್ ಗೆ ಭೇಟಿ ನೀಡಲಿದ್ದಾರೆ. ಈ‌ ಸಂದರ್ಭ KIADB ಮೊದಲ ಹಂತದ ಜಾಗದಲ್ಲಿ IFFCO ನ್ಯಾನೋ ಯೂರಿಯಾ ಸ್ಥಾವರಕ್ಕೆ ಅಡಿಗಲ್ಲು ಹಾಕಲಿದ್ದಾರೆ.

Indian Farmer's Fertilizers Limited ನ ಈ ಸ್ಥಾವರದ ಮೂಲಕ ಯೂರಿಯಾ ಗೊಬ್ಬರ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾಗುವುದು. ಇದರ ಕಾಮಗಾರಿ ಚಾಲನೆ ಹಾಗೂ KIAFB ಪ್ರದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ಸಹ ನಡೆಸಲಿದ್ದಾರೆ.

CM ಆಗಮನ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶೀಕೃಷ್ಣ ಖುದ್ದು ಭೇಟಿ ನೀಡಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Edited By :
PublicNext

PublicNext

13/07/2022 08:02 pm

Cinque Terre

46.3 K

Cinque Terre

0

ಸಂಬಂಧಿತ ಸುದ್ದಿ