ಆನೇಕಲ್: ಅದು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ನಿರ್ಮಾಣವಾಗಿರುವ ಕೆರೆ. ರಾಜ್ ಬಹುದೂರ್ ಬಿ.ಕೆ.ಗರುಡಾಚಾರಿ ಮತ್ತು ವಿಶ್ವೇಶ್ವರಯ್ಯ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿರುವ ಕೆರೆ. ಇಂತಹ ವೈಶಿಷ್ಟ ಇರುವಂತಹ ಕೆರೆಯಲ್ಲಿ ಮೂರುವರೆ ದಶಕಗಳ ನಂತರ ಕೆರೆ ಕೋಡಿ ಹರಿದ ಪರಿಣಾಮ ಊರಿನ ಗ್ರಾಮಸ್ಥರು ಇಂದು ಗಂಗಾದೇವಿಯನ್ನು ಇಟ್ಟು ತೆಪ್ಪೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದರು.
ಹೌದು. ಆನೇಕಲ್ ತಾಲೂಕಿನ ಜಿಗಣಿ ಸಮೀಪ ಕ್ಯಾಲಸನಹಳ್ಳಿ ಕೆರೆಯಲ್ಲಿ ಮೂರುವರೆ ದಶಕಗಳ ನಂತರ ಮಳೆಯಿಂದಾಗಿ ಕೆರೆ ತುಂಬಿದೆ. ಇದರಿಂದ ಸಂತಸಗೊಂಡ ಊರಿನ ಗ್ರಾಮಸ್ಥರು ಇಂದು ಗಂಗಾದೇವಿಗೆ ಪೂಜೆ ಸಲ್ಲಿಸಿ ತೆಪ್ಪೋತ್ಸವ ಆಚರಣೆ ಮಾಡಿದರು.
ಇನ್ನು ಕಬ್ಬಿಣದ ಖಾಲಿ ಡ್ರಮ್‌ಗಳು, ಬಿದಿರಿನ ಬೊಂಬುಗಳನ್ನು ಬಳಸಿ ತೆಪ್ಪ ಕಟ್ಟಲಾಗಿತ್ತು. ತೆಪ್ಪದಲ್ಲಿ ಗಂಗಾದೇವಿಯನ್ನು ಅಧಿಷ್ಠಾನಗೊಳಿಸಿ ಪೂಜಿಸಲಾಯಿತು. ಇನ್ನು ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಪ್ರಮುಖ ಬೀದಿಗಳಲ್ಲಿ ಕಳಶ ಹೊತ್ತು, ದೇವಸ್ಥಾನದ ಆವರಣದಲ್ಲಿಟ್ಟು ಪೂಜೆ ಮಾಡಿಸಲಾಯಿತು..
ಒಟ್ನಲ್ಲಿ 35 ವರ್ಷಗಳ ನಂತರ ಕೆರೆ ತುಂಬಿದ ಪರಿಣಾಮ ಊರಿನ ಗ್ರಾಮಸ್ಥರು ಗಂಗಾ ದೇವಿಗೆ ವಿಶೇಷ ಅಲಂಕಾರ ಮಾಡಿ ಕೆರೆಗೆ ಬಾಗಿನ ಅರ್ಪಿಸಿ ಖುಷಿಪಟ್ಟರು.
ಹರೀಶ್ ಗೌತಮಾನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್
PublicNext
12/10/2022 05:00 pm