ಬೆಂಗಳೂರು : ರಕ್ಷಣೆ ನೀಡಬೇಕಿದ್ದ ಪೊಲೀಸಪ್ಪನ ಪ್ರಣಯ ಪ್ರಸಂಗಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ಸಿಬ್ಬಂದಿ ಅಚ್ಚರಿಗೊಂಡಿದ್ದಾರೆ.
ತಾಳಿಕಟ್ಟಿದ್ದ ಹೆಂಡತಿಯನ್ನು ಅಕ್ಕನ ಮಗಳು ಎಂದು ಸೂಲಿಬೆಲೆ ಮನೆ ಮಾಲೀಕರಿಗೆ ಪರಿಚಯಿಸಿದ್ದ. ಯಾಕೆ ಅಂದರೆ ತಾಳಿ ಕಟ್ಟುವ ಮೊದಲೇ ಅನೇಕ ಜನ ಪ್ರೇಯಸಿಯರನ್ನ ಮನೆಗೆ ಕರೆಸಿದ್ದನಂತೆ ಈ ರಮೇಶ್.
ಮೂಲತಹ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ರಮೇಶ್ ಗೆ ಮೇಘನಾ, ಕವಿತಾ & ರಂಜಿತಾ ಎಂಬ ಯುವತಿಯರ ಜೊತೆ ಸ್ನೇಹಸಂಬಂಧವಿತ್ತು. ಇದಕ್ಕೆ ಈ ಫೋಟೋಗಳೇ ಸಾಕ್ಷಿ.
ನವಂಬರ್ 2021ರಂದು ಮದುವೆಯಾಗಿದ್ದ ಬೆಂಗಳೂರಿನ ಅಮೃತಹಳ್ಳಿಯ ರಾಶಿ ರಮೇಶ್ ಸದಾಶಿವ ಹಿಪ್ಪರಗಿಯನ್ನ ಯಲಹಂಕ ಸಮೀಪದ ಬ್ಯಾಟರಾಯನಪುರ ಸಬ್ ರಿಜಿಸ್ಟರ್ ಕಚೇರಿಲಿ ಮದುವೆಯನ್ನ ರಿಜಿಸ್ಟರ್ ಮಾಡಿಸಿದ್ದರು.
ಸ್ವಲ್ಪದಿನ ಚನ್ನಾಗಿದ್ದ ದಂಪತಿಯ ಖಾಸಗಿ ಜೀವನ ಸೂಲಿಬೆಲೆ ಪೊಲೀಸ್ ಠಾಣೆ ಮೆಟ್ಟಿಲೇರಿ ಬಟಾಬಯಲಾಗಿದೆ.
ನ್ಯಾಯಕೊಡಿಸಬೇಕಿದ್ದ ಪೊಲೀಸಪ್ಪನ ವಿರುದ್ಧ ಹೆಂಡತಿಯಾದವಳೇ ದೂರು ದಾಖಲಿಸಿ ಗಂಡನ ಮೊದಲ ಪ್ರೇಯಸಿಯರು, ಅವರೊಟ್ಟಿಗಿನ ಹಸಿಬಿಸಿ ಫೋಟೋಸ್ ರಮೇಶನ ಪ್ರಣಯದಾಟವನ್ನು ತೋರಿಸುತ್ತದೆ.
ಇನ್ನು ಅಕ್ರಮ ಗಾಂಜಾ ಮಾರಾಟ ಅಡ್ಡೆ ವೇಳೆ ಕ್ರಮ ಜರುಗಿಸಲು DYSP ಸೂಚಿಸಿದ್ದರು, ತಲೆಕೆಡಿಸಿಕೊಳ್ಳದ PSI ರಮೇಶ್ ನನ್ನು ಗ್ರಾಮಾಂತರ ಎಸ್.ಪಿ. ವಂಶೀಕೃಷ್ಣ ರವರು ಅಮಾನತು ಮಾಡಿ ಆದೇಶಿದ್ದಾರೆ.
SureshBabu Public Next ಹೊಸಕೋಟೆ..
PublicNext
09/06/2022 08:05 pm